LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಂಪೇಗೌಡ ಏರ್‌ಪೋರ್ಟ್‌ನಲ್ಲೂ ಭಿಕ್ಷಾಟನೆ ಕಾಟ; ಇಬ್ಬರ ಬಂಧನ

Advertisement

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭಿಕ್ಷಾಟನೆ ಕಾಟ ಹೆಚ್ಚಾಗಿದೆ. ಏರ್‌ಪೋರ್ಟ್‌ನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರನ್ನು ಏರ್‌ಪೋರ್ಟ್‌ ಪೊಲೀಸರು ಬಂಧಿಸಿದ್ದಾರೆ.

ಎರಡು ದಿನದಲ್ಲಿ ಇಬ್ಬರು ಅರೆಸ್ಟ್‌ ಮಾಡಲಾಗಿದೆ. ಒಳಬರುವ ಪ್ರಯಾಣಿಕರಿಂದ ಹಣ ಕೇಳುತ್ತಿದ್ದ ಪ್ರತೀಕ್ ಭಾಟಿಯಾ ಎಂಬ ವ್ಯಕ್ತಿ ಬಂಧನವಾಗಿದೆ. ಈ ಹಿಂದೆಯೂ ಪ್ರತೀಕ್ ಭಾಟಿಯಾ ಟರ್ಮಿನಲ್ 2ರಲ್ಲೂ ಇದೇ ರೀತಿ ಮಾಡಿ ಬಂಧನವಾಗಿದ್ದ. ಬಳಿಕ ಮತ್ತೆ ಅದೇ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ.

ಅಕ್ಟೋಬರ್ 15 ರಂದು ಏರ್ಪೋಟ್ ಲ್ಯಾಂಡ್‌ಸೈಡ್ ಭದ್ರತಾ ಸಿಬ್ಬಂದಿ, ಮತ್ತೊಬ್ಬ ಪುನರಾವರ್ತಿತ ಅಪರಾಧಿ ವೆಂಕಟ ದಿನೇಶ್ ಕುಮಾರ್‌ನನ್ನು ಬಂಧಿಸಿದ್ದಾರೆ. ಧಾರ್ಮಿಕ ಉಡುಪಿನಲ್ಲಿ ವೇಷ ಧರಿಸಿ, ಮುಖಕ್ಕೆ ಮಾಸ್ಕ್ ಧರಿಸಿದ್ದ ದಿನೇಶ್ ಕುಮಾರ್ ಅವರನ್ನು T2 ನಿರ್ಗಮನ ಪ್ರದೇಶದಲ್ಲಿ ಹಣ ಕೇಳುವಾಗ ವಶಕ್ಕೆ ಪಡೆಯಲಾಗಿತ್ತು.

ಸಾರ್ವಜನಿಕ ಕಿರಿಕಿರಿ ಮತ್ತು ಭದ್ರತಾ ನಿಯಮಗಳ ಅಡಿಯಲ್ಲಿ ಹೆಚ್ಚಿನ ತನಿಖೆ ಮತ್ತು ಕ್ರಮಕ್ಕಾಗಿ ಇಬ್ಬರೂ ವ್ಯಕ್ತಿಗಳನ್ನು ಏರ್ಪೋಟ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಂಗಾರತಿ ಮಾದರಿ ಕಾವೇರಿ ಮಾತೆಗೆ ಆರತಿ; ಪೂಜೆ ನೆರವೇರಿಸಿದ ಸಿಎಂ ಡಿಕೆಶಿಕ್ಷೇತ್ರ ಪುನರ್‌ವಿಂಗಡನೆ ಮಸೂದೆ ಮಂಡನೆಗೆ ಮುನ್ನ ಸರ್ವಪಕ್ಷ ಸಭೆ ನಡೆಸಿ – ಮೋದಿಗೆ 4ನೇ ಬಾರಿಗೆ ಖರ್ಗೆ ಪತ್ರಕೆಂಪೇಗೌಡ ಏರ್‌ಪೋರ್ಟ್‌ನಲ್ಲೂ ಭಿಕ್ಷಾಟನೆ ಕಾಟ; ಇಬ್ಬರ ಬಂಧನಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು3 ಲಕ್ಷ ಲಂಚ ಪಡೆಯುವಾಗ ʻಲೋಕಾʼ ದಾಳಿ – ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಎಸ್‌ಐಟಿ ತನಿಖೆಯಾಗಲಿ: ಪ್ರಹ್ಲಾದ್ ಜೋಶಿ ಆಗ್ರಹಪಿಜಿಸಿಇಟಿ ಫಲಿತಾಂಶ ಪ್ರಕಟ, ಶುಲ್ಕ ಕಟ್ಟಲು ಅ.19 ಕೊನೆ ದಿನ: ಕೆಇಎರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ – ಹೊಸ ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ: ಸಿಎಂಹಾವು ಕಚ್ಚಿ ಎರಡು ವರ್ಷದ ಮಗು ದುರ್ಮರಣನೆಲಮಂಗಲ ಹೆದ್ದಾರಿಯಲ್ಲಿ ಹಿಟ್‌ & ರನ್‌ಗೆ ಕೇರಳದ ಯುವತಿ ಬಲಿ