LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಸ್ ಟಿಕೆಟ್ ದರ ಹೆಚ್ಚಳದ ಸುಳಿವು ನೀಡಿದ ಬೈರತಿ ಸುರೇಶ್

Advertisement

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯ ಸುಳಿವನ್ನು ಸಾರಿಗೆ ಸಚಿವ ಬೈರತಿ ಸುರೇಶ್  ನೀಡಿದ್ದಾರೆ.

ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಸಾರಿಗೆ ಸಚಿವ ಮಾತನಾಡಿ, ಕೇಂದ್ರ ಕಾರಣ ರಾಜ್ಯ ಕಾರಣ ಅಂತ ಮಾತಾಡಲ್ಲ. ಇಡೀ ದೇಶದಲ್ಲಿ ತೈಲ ದರ ಹೆಚ್ಚಾಗಿದೆ. ಅದಕ್ಕೆ ಅನುಪಾತವಾಗಿ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾವನೆ ಇದೆ. ಪ್ರಸ್ತಾವನೆ ಇನ್ನೂ ಪರಿಶೀಲನೆಯಲ್ಲಿದೆ. ಸಿಎಂ ಜತೆ ಮಾತಾಡ್ತೇವೆ, ಸರ್ಕಾರ ಏನು ತೀರ್ಮಾನ ತಗೊಳ್ಳುತ್ತೋ ಅದರ ಪ್ರಕಾರ ಹೆಚ್ಚಿಸಲಾಗುತ್ತೆ ಎಂದು ತಿಳಿಸಿದರು. 

ಬಸ್ ಟಿಕೆಟ್ ದರ ಹೆಚ್ಚಳ ವಿರೋಧ ಮಾಡಲು ಇಲ್ಲಿ ಕಾರಣನೇ ಇಲ್ಲ. ಬಿಜೆಪಿಯವರಿಗೂ ತೈಲ ದರ ಹೆಚ್ಚಾಗಿರೋದು ಗೊತ್ತು. ನಮ್ಮ ಸಾರಿಗೆಯ ನಾಲ್ಕು ನಿಗಮಗಳೂ ನಷ್ಟದಲ್ಲಿ ನಡೀತಿವೆ. ಐದು ಸಾವಿರ ಕೋಟಿ ನಷ್ಟದಲ್ಲಿ ಸಾರಿಗೆ ನಿಗಮಗಳು ನಡೀತಿವೆ. ಅದನ್ನು ಸರಿದೂಗಿಸಬೇಕಲ್ಲ, ಸಿಬ್ಬಂದಿಗೂ ವೇತನ ಕೊಡಬೇಕಲ್ಲ
ಬಸ್‌ಗಳಿಗೆ ಡೀಸೆಲ್ ಹಾಕಿಸಬೇಕಲ್ಲ. ಚರ್ಚೆ ಮಾಡಿ ಟಿಕೆಟ್ ದರ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

 

ವಿದ್ಯಾರ್ಥಿಗಳ ಪಾಸ್‌ಗೆ ಸಮಸ್ಯೆ ಏನೂ ಆಗ್ತಿಲ್ಲ. ಸ್ಟ್ರೀಮ್ ಲೈನ್ ಮಾಡಿ ಪಾಸ್ ವಿತರಣೆ ಮಾಡ್ತೇವೆ. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪಾಸ್ ಕೊಡ್ತೇವೆ ಎಂದು ತಿಳಿಸಿದರು.

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡಬಾರದು. ಏನೇ ಇದ್ರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಇತಿಹಾಸದಲ್ಲಿ ಯಾವಾಗಲಾದರೂ ಸಿಎಂ ಹಾಗೂ ಕೇಂದ್ರ ಸಚಿವ ಬಹಿರಂಗ ಚರ್ಚೆ ಮಾಡಿದ್ದಾರಾ? ಅಲ್ಲಿ ಹೋಗಿ ಚರ್ಚೆಗೆ ಬನ್ನಿ ಅನ್ನೋದು ಸರಿನಾ? ರಾಜ್ಯದ ಘನತೆಗೆ ಧಕ್ಕೆ ಆಗುತ್ತೆ ಇದರಿಂದ ಎಂದು ಟಾಂಗ್ ಕೊಟ್ಟರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಕ್ಸೋ ಪ್ರಕರಣ – ರೆಗ್ಯುಲರ್ ಬೇಲ್‌ಗೆ ಅರ್ಜಿ ಸಲ್ಲಿಸಿದ ವಚನಾನಂದ ಸ್ವಾಮೀಜಿಮೊಹರಂ ವೇಳೆ ದುಷ್ಕೃತ್ಯಕ್ಕೆ ಸಂಚು – ವಿಷ ತುಂಬಿದ 14,900 ಕ್ಯಾಪ್ಸೂಲ್ ಜೊತೆ ಪುಣೆಯಲ್ಲಿ ಓರ್ವನ ಬಂಧನRSS ವಿರುದ್ಧ ಅವಹೇಳನಕಾರಿ ಪೋಸ್ಟ್‌ – ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್‌ ಸಮನ್ಸ್‌ರಾಜ್ಯದ ವಿವಿಧ ಜಿಲ್ಲಾ ಕೋರ್ಟ್‌ಗಳಿಗೆ ಹುಸಿ ಬಾಂಬ್ ಬೆದರಿಕೆಕೆಂಪೇಗೌಡ ಜಯಂತಿ ಆಚರಣೆ ವೇಳೆ ಹೈಡ್ರಾಮಾ – ಪ್ರದೀಪ್‌ ಈಶ್ವರ್‌ ವಿರುದ್ಧ ಆಕ್ರೋಶ ಸ್ಫೋಟರಾಮಮಂದಿರಕ್ಕೆ ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೆ ಲೆಕ್ಕ ಎಲ್ಲಿ – ಬಿ.ಕೆ ಹರಿಪ್ರಸಾದ್‌ ಪ್ರಶ್ನೆಶಾಲೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅತಿಥಿ ಶಿಕ್ಷಕ – ಹೃದಯಾಘಾತದಿಂದ ಸಾವುಕಾರಲ್ಲೇ ಪ್ರೇಮಿಗಳ ಗಲಾಟೆ – ಪೆಟ್ರೋಲ್‌ ಬಾಂಬ್‌ ಸಿಡಿಸಿಕೊಂಡು ಯುವಕ ಆತ್ಮಹತ್ಯೆಮೃತ ಪರುತಗೌಡ ಪಾಟೀಲ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಸತೀಶ್ ಜಾರಕಿಹೊಳಿನಿಸರ್ಗ ಕಾಲೋನಿ ಹಾಗೂ ಫಾರ್ಚುನ ಕಾಲೋನಿ ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಆಸಿಫ್ ( ರಾಜು) ಸೆಟ್