LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್‌ನಿಂದ ಹಲ್ಲೆ – ಡಾಬಾ ಮಾಲೀಕ ಸಾವು

Advertisement

ಬಾಗಲಕೋಟೆ: ಪರಪ್ಪನ ಅಗ್ರಹಾರ ಜೈಲಿನ ಹೆಡ್ ವಾರ್ಡರ್ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗದ್ದನಕೇರಿ ಕ್ರಾಸ್‌ ಬಳಿಯ ಡಾಬಾ ಮಾಲೀಕರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ‌

ಮೆಹಬೂಬಸಾಬ್ ಪಟ್ಟೆವಾಲೆ (58) ಮೃತ ದುರ್ದೈವಿ. ರಜೆ ಮೇಲೆ ಊರಿಗೆ ಬಂದಿದ್ದ ಜೈಲು ವಾರ್ಡರ್ ಅಡಿವೆಪ್ಪ ಸೆ.17ರ ರಾತ್ರಿ ಮೆಹಬೂಬಸಾಬ್ ಅವರ ಡಾಬಾಗೆ ಬಂದು ಊಟ ಕೇಳಿದ್ದರು. ಈ ವೇಳೆ ಊಟ ಖಾಲಿಯಾಗಿದೆ ಎಂದಿದ್ದಕ್ಕೆ ಜಗಳ ತೆಗೆದಿದ್ದ ವಾರ್ಡರ್‌, ಡಾಬಾ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದರು. 

ಈ ವೇಳೆ ಮೆಹಬೂಬ್‌ ಸಾಬ್ ನೆಲಕ್ಕೆ ಬಿದ್ದು ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣವೇ ಮೆಹಬೂಬ್ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಈ ಗಲಾಟೆಯಲ್ಲಿ ಹೆಡ್ ವಾರ್ಡರ್ ಅಡಿವೆಪ್ಪ ಅವರ ತಲೆಗೂ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ.

ಈ ಸಂಬಂಧ ಕಲಾದಗಿ ಠಾಣೆ ಪೊಲೀಸರು ಆರೋಪಿ ಅಡಿವೆಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಯಲ್ಲಿ ನಿಗೂಢ ಸ್ಫೋಟ – ಗೋಡೆ ಕುಸಿದು ಅಡುಗೆ ಸಿಬ್ಬಂದಿಗೆ ಗಾಯಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ನಿಗಮಗಳಿಗೆ 8 ಸಾವಿರ ಕೋಟಿ ನಷ್ಟ1 ಲಕ್ಷ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಗ್ನಿಶಾಮಕ ಅಧಿಕಾರಿರಾಜ್ಯದ 50 ಲಕ್ಷ ರೈತರಿಗೆ 2,500 ಇನ್‌ಪುಟ್ ಸಬ್ಸಿಡಿ: ಪರಮೇಶ್ವರ್ ಘೋಷಣೆಸಾವಿರಾರು ಮತದಾರರ ಹೆಸರು ತೆಗೆಯಲು ಅಭಯ್ ಪಾಟೀಲ್ ಪತ್ರ: ಬಂಧನಕ್ಕೆ ಹರಿಪ್ರಸಾದ್ ಆಗ್ರಹಲೋಕಾಯುಕ್ತರಿಂದ ಫೋನ್ ಪೇ ಪರಿಶೀಲನೆ, ಅಧಿಕಾರಿಗಳು ತಬ್ಬಿಬ್ಬುದ್ವಿಚಕ್ರ ವಾಹನಕ್ಕೆ ಸಿಮೆಂಟ್ ಲಾರಿ ಡಿಕ್ಕಿ – ವಿದ್ಯಾರ್ಥಿನಿ ದಾರುಣ ಸಾವುಪರಪ್ಪನ ಅಗ್ರಹಾರ ಜೈಲಿನ ವಾರ್ಡರ್‌ನಿಂದ ಹಲ್ಲೆ – ಡಾಬಾ ಮಾಲೀಕ ಸಾವುತಮಿಳುನಾಡಿಗೆ ಕಾವೇರಿ ನೀರು – ಸರ್ಕಾರದಿಂದ ನ್ಯಾಯಾಲಯದಲ್ಲಿ ಮೇಲ್ಮನವಿ: ಸಿಎಂ ಡಿಕೆಶಿಚೆನ್ನೈ – ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ; ಮೂವರು ದುರ್ಮರಣ