LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆಸೀಫ್ ಸೇಠ್

Advertisement
Advertisement
Advertisement

ಬೆಳಗಾವಿ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇರ್ ಅವರಿಗೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಗುರುವಾರ ಅಧಿಕಾರ ಸ್ವೀಕರಿಸಿದರು.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕೋಟಾದಡಿ ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಆಸೀಫ್ ಸೇರ್ ಬಲವಾಗಿ ಒತ್ತಾಯಿಸಿದ್ದರು. ಸಚಿವ ಸ್ಥಾನಕ್ಕಾಗಿ ಅವರು ಹಲವು ಬಾರಿ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲೂ ಲಾಬಿ ನಡೆಸಿದ್ದರು. ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಮುಸ್ಲಿಂ ಧರ್ಮಗುರುಗಳು ಹಾಗೂ ಸಮುದಾಯದ ಮುಖಂಡರು ಕೂಡ ಸೇರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಬೃಹತ್ ಸಮಾವೇಶ ನಡೆಸಿದ್ದರು.

 

ಆದರೆ ಹಾಲಿ ಸಚಿವ ಸಂಪುಟದಲ್ಲಿ ಮತ್ತಷ್ಟು ಸ್ಥಾನ ಹೊಂದಾಣಿಕೆ ಮಾಡುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸೇರ್ ಅವರನ್ನು ಸಮಾಧಾನಪಡಿಸಲು ಬುಡಾ ಅಧ್ಯಕ್ಷ ಸ್ಥಾನದ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಈ ಮೂಲಕ ಸಚಿವ ಸ್ಥಾನದ ಬೇಡಿಕೆಯಿಂದ ಉಂಟಾಗಿದ್ದ ಅಸಮಾಧಾನವನ್ನು ತಣಿಸುವ ಪ್ರಯತ್ನ ನಡೆದಿದೆ.

 

ಬೆಳಗಾವಿ ನಗರ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶಾಸಕ ಆಸೀಫ್ ಸೇಠ್ ಅವರು ಇಂದು ಅಧಿಕಾರ ಸ್ವೀಕರಿಸಿದರು.

ಬೆಳಗಾವಿ ನಗರ ಅಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ ಮಾಜಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅಧಿಕಾರ ಹಸ್ತಾಂತರಿಸಿದರು. ಹೂಗುಚ್ಚ ನೀಡಿ ಮಾಜಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅವರು ಅಭಿನಂದಿಸಿದರು. ಆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್ ಇದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉಡುಪಿ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ವೇಗ; ಬೀಚ್‌ಗಳು, ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತುಸಿಇಟಿ ಪ್ರವೇಶ ಮತ್ತು ಸೀಟು ರದ್ದತಿಗೆ ಆ.29 ಕೊನೆ ದಿನ: ಕೆಇಎRSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರು ಅಮಾನತು180 ಕೋಟಿ ಹೈಕಮಾಂಡ್‌ಗೆ ಹೋಗಿರೋದು ಬಾಯಿಬಿಟ್ರೆ ಕಷ್ಟ ಅಂತ ನಾಗೇಂದ್ರನನ್ನ ಕ್ಯಾಬಿನೆಟ್‌ಗೆ ತಗೊಂಡ್ರಾ? – ಅಶೋಕ್ ಪ್ರಶ್ನೆನಾಡಗೀತೆ ಧಾಟಿ, ಅವಧಿ ನಿಗದಿ ವಿಚಾರ – ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರಅಸ್ಸಾಂನಲ್ಲಿ 168 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ಡ್ರಗ್ ಪೆಡ್ಲರ್ ಅರೆಸ್ಟ್ಅನೈತಿಕ ಸಂಬಂಧದ ಶಂಕೆ; ಮಹಿಳೆಯ ಕುಟುಂಬಸ್ಥರಿಂದ ವ್ಯಕ್ತಿಯ ಭೀಕರ ಕೊಲೆಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಯುವಕ ಆತ್ಮಹತ್ಯೆಬೆಂಗಳೂರಿನ 11 ಮಂದಿ ಸೇರಿ ಕರ್ನಾಟಕದ 13 ಮಂದಿ ವಿವರ ಲಭ್ಯರಾಜ್ಯದ 101 ತಾಲೂಕುಗಳಲ್ಲಿ ಬರ; ಸರ್ಕಾರ ಅಧಿಕೃತ ಘೋಷಣೆ – 1 ಲಕ್ಷದವರೆಗೆ ಸಾಲ ಮನ್ನಾಕ್ಕೆ ಬಿಜೆಪಿ ಆಗ್ರಹ