LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಗಸ್ಟ್ 29 ರಂದು ಹಸೆಮಣೆ ಏರಲಿದ್ದಾರೆ ನಟ ಚಿಕ್ಕಣ್ಣ

Advertisement
Advertisement

ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ  ಕಾಲಿಡಲು ಸಜ್ಜಾಗಿದ್ದಾರೆ. ಮಂಡ್ಯ ಮೂಲದ ಪಾವನಾ ಜೊತೆ ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿದ್ದು, ಮದುವೆ ದಿನಾಂಕವೂ ನಿಗದಿಯಾಗಿದೆ.

ಆಗಸ್ಟ್ 29 ಮತ್ತು 30 ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಈ ಮದುವೆ ಮಹೋತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರು, ತಂತ್ರಜ್ಞರು ಹಾಗೂ ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಸದ್ಯ ಚಿಕ್ಕಣ್ಣ ಅವರ ಕೈಹಿಡಿಯಲಿರುವ ವಧು. ಇಂಜಿನಿಯರಿಂಗ್ ಪದವಿ ಪಡೆದಿರುವ ಪಾವನಾ ಅವರೊಂದಿಗೆ ಚಿಕ್ಕಣ್ಣ ಹೊಸ ಜೀವನ ಆರಂಭಿಸಲಿದ್ದು ಆಗಸ್ಟ್‌ 2025 ರಲ್ಲಿ ಮದುವೆ ನಿಶ್ಚಯವಾಗಿತ್ತು. 

ಮೈಸೂರಿನ ಬಲ್ಲಹಳ್ಳಿಯಲ್ಲಿ ಜನಿಸಿದ ಚಿಕ್ಕಣ್ಣ ಅವರ ಜೀವನ ಪಯಣ ಅತ್ಯಂತ ಸ್ಪೂರ್ತಿದಾಯಕ. ಎಸ್‌ಎಸ್‌ಎಲ್‌ಸಿ ಶಿಕ್ಷಣದ ನಂತರ ಜೀವನೋಪಾಯಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಅವರಿಗೆ, ಶಾಲಾ ದಿನಗಳಿಂದಲೇ ನಾಟಕಗಳಲ್ಲಿ ನಟಿಸುವ ಹವ್ಯಾಸವಿತ್ತು.

ಆರ್ಕೆಸ್ಟ್ರಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಕಿರುತೆರೆಗೆ ಪ್ರವೇಶಿಸಿದ ಇವರು, ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಟ ಯಶ್ ಅಭಿನಯದ ‘ಕಿರಾತಕ’ ಸಿನಿಮಾ ಚಿಕ್ಕಣ್ಣ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಅಲ್ಲಿಂದ ಹಿಂತಿರುಗಿ ನೋಡದ ಚಿಕ್ಕಣ್ಣ, ಕನ್ನಡದ ಬಹುತೇಕ ಎಲ್ಲಾ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದಾರೆ. ಇದೀಗ ಅವರು ನಾಯಕ ನಟನಾಗಿಯೂ ಸಡ್ಡು ಹೊಡೆಯುತ್ತಿದ್ದು, ಹೊಸ ಬಾಳಿಗೆ ಕಾಲಿಡುತ್ತಿರುವುದಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲಿ ಪಂಚರ್ ದಂಧೆ – ಕಿಡಿಗೇಡಿಗಳು ಕೊನೆಗೂ ಲಾಕ್‌!ಶಾಲೆಗೆ ತೆರಳುವಾಗ ಥಾರ್‌ ಡಿಕ್ಕಿ – 10 ವರ್ಷದ ಬಾಲಕಿ ಸ್ಥಳದಲ್ಲೇ ಸಾವುಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್‌ ಯೋಗಿರಾಜ್‌ರಿಂದ ಪ್ರಧಾನಿಗೆ ಸಿದ್ಧವಾಗಿದೆ ವಿಶೇಷ ಉಡುಗೊರೆಕೊಡಗಿನಲ್ಲಿ ಗಾಳಿ ಮಳೆ ಆರ್ಭಟ ಜೋರು – ಹಾರಂಗಿ ಜಲಾಶಯದಿಂದ 5,365 ಕ್ಯೂಸೆಕ್ ನೀರು ಕಾವೇರಿ ನದಿಗೆಪಶ್ಚಿಮ ಘಟ್ಟದಲ್ಲಿ ವರುಣನ ಅಬ್ಬರ – ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ ಗೋಕಾಕ್ ಫಾಲ್ಸ್ಎಸ್‌ಐಆರ್‌ ಸಮೀಕ್ಷೆ| ಅಧಿಕಾರಿಯ ಮೇಲೆ ಹಲ್ಲೆ – ರಕ್ತ ಬರುವಂತೆ ಹೊಡೆದಿದ್ದ ಡಿಜೆಹಳ್ಳಿಯ ಇಬ್ಬರು ಅರೆಸ್ಟ್‌ಸತ್ಯದ ಅನ್ವೇಷಣೆಯ ಮೂಲಕ ಜ್ಞಾನ ಸಂಪಾದಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವವರೇ ನಿಜವಾದ ಶಿಷ್ಯರು: ಡಾ. ಎಂ.ಪಿ. ಚಂದ್ರಿಕಾಜ್ಞಾನಯಾನಕ್ಕೆ ದೀಪ ಹಚ್ಚಿ, ಬದುಕಿನ ಪಯಣದಲ್ಲಿ ಜೊತೆ ನಿಲ್ಲುವವರೇ ಗುರುಗಳು: ಶ್ರೀಮತಿ ಮಂಗಳಗೌರಿ ಹೆಗ್ಡೆಎಸ್‌ಐಆರ್‌ ಸಮೀಕ್ಷೆ| ಅಧಿಕಾರಿಯ ಮೇಲೆ ಹಲ್ಲೆ – ರಕ್ತ ಬರುವಂತೆ ಹೊಡೆದಿದ್ದ ಡಿಜೆಹಳ್ಳಿಯ ಇಬ್ಬರು ಅರೆಸ್ಟ್‌ಸುಪ್ರೀಂನಿಂದ ಜಾಮೀನು ರದ್ದು – ಮೇಘಾಲಯ ಕೋರ್ಟ್‌ಗೆ ಶರಣಾದ ಹನಿಮೂನ್ ಹಂತಕಿ