ಲಕ್ನೋ: ಗಂಡನ ಮೇಲೆ ಆಸಿಡ್ ಎರಚಿದ ಮಹಿಳೆಗೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.75 ಲಕ್ಷ ದಂಡ ವಿಧಿಸಿದೆ.
ಕಹಕಂಶಾ (30) ಶಿಕ್ಷೆಗೆ ಗುರಿಯಾದ ಮಹಿಳೆ. ಈಕೆ 2025ರ ಮಾ. 7 ರಂದು ಪತಿ ಮುಜಾಫರ್ (35) ಮಲಗಿದ್ದ ವೇಳೆ ಹತ್ಯೆ ಮಾಡುವ ಉದ್ದೇಶದಿಂದ ಮುಖಕ್ಕೆ ಆಸಿಡ್ ಸುರಿದಿದ್ದಳು. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಮತ್ತೆ ಮತ್ತೆ ಆತನ ಮೇಲೆ ಆಸಿಡ್ ದಾಳಿ ನಡೆಸಿದ್ದಳು. ಇದರಿಂದ ಮುಖ ಸಂಪೂರ್ಣವಾಗಿ ವಿರೂಪಗೊಂಡು ಎರಡೂ ಕಣ್ಣುಗಳ ದೃಷ್ಟಿಯನ್ನು ಆತ ಕಳೆದುಕೊಂಡಿದ್ದ.
ಚಂದೌಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಫಾಸ್ಟ್ ಟ್ರ್ಯಾಕ್ ಕೋರ್ಟ್) ಗೋಪಾಲ್ ಜಿ ಕಹಕಂಶಾಳನ್ನು ಮೇ 27 ರಂದು ದೋಷಿ ಎಂದು ಘೋಷಿಸಿತ್ತು. ಇಂದು (ಜೂ.1) ಶಿಕ್ಷೆ ಪ್ರಮಾಣವನ್ನು ಕೋರ್ಟ್ ಪ್ರಕಟಿಸಿದೆ.



