LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೆರಿಗೆ ವಂಚನೆ ಆರೋಪ – ನಟಿ ರಕುಲ್ ಪ್ರೀತ್ ಸಿಂಗ್‌ಗೆ ಐಟಿ ಶಾಕ್‌

Advertisement

ಸಿನಿಮಾ ಯೋಜನೆಗಳ ಹೆಸರಿನಲ್ಲಿ ವಿದೇಶಕ್ಕೆ ಅಕ್ರಮವಾಗಿ ಹಣ ರವಾನಿಸಲಾಗಿದೆ ಎಂಬ ಆರೋಪದ ಮೇಲೆ ನಟಿ ರಕುಲ್ ಪ್ರೀತ್ ಸಿಂಗ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಚಲನಚಿತ್ರ ಯೋಜನೆಗಳ ಹೆಸರಿನಲ್ಲಿ ವಿದೇಶಕ್ಕೆ ಹಣವನ್ನು ರವಾನಿಸಲಾಗಿದೆ ಎಂಬ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯು ಚಲನಚಿತ್ರೋದ್ಯಮದ ಹಲವು ಗಣ್ಯರು ಮತ್ತು ಅವರ ಕಂಪನಿಗಳಿಗೆ ಸಂಬಂಧಿಸಿದ ಸುಮಾರು 12 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

ನಟಿ ರಕುಲ್ ಪ್ರೀತ್ ಸಿಂಗ್, ನಿರ್ಮಾಪಕ ವಾಶು ಭಗ್ನಾನಿ ಮತ್ತು ಪನೋರಮಾ ಸ್ಟುಡಿಯೋಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತಲಾಶ್‌ ನಡೆಸಲಾಗುತ್ತಿದೆ.

ರಕುಲ್ ಪ್ರೀತ್ ಸಿಂಗ್ ಅವರು ಇತ್ತೀಚೆಗೆ ಮೇ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಪತಿ ಪಟ್ನಿ ಔರ್ ವೋ ದೋ’ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್ ಮತ್ತು ವಾಮಿಕಾ ಗಬ್ಬಿ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ವಶು ಭಗ್ನಾನಿ ಅವರ ಪೂಜಾ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಕೊನೆಯದಾಗಿ ‘ಮೇರೆ ಹಸ್ಬೆಂಡ್ ಕಿ ಬಿವಿ’ ಚಿತ್ರವನ್ನು ನಿರ್ಮಿಸಿತ್ತು. ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್ ಮತ್ತು ರಕುಲ್ ಪ್ರೀತ್ ಸಿಂಗ್ ನಟಿಸಿದ್ದ ಈ ಸಿನಿಮಾ ಫೆಬ್ರವರಿ 21, 2025 ರಂದು ತೆರೆಕಂಡಿತ್ತು. ಮತ್ತೊಂದೆಡೆ, ಪನೋರಮಾ ಸ್ಟುಡಿಯೋಸ್ ಸಂಸ್ಥೆಯ ಇತ್ತೀಚಿನ ಚಿತ್ರ ‘ಧಮಾಲ್ 4’ ಆಗಿದ್ದು, ಇದು ಜುಲೈ 10ರಂದು ಬಿಡುಗಡೆಯಾಗಿದೆ. ಇದೇ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆಯಾಗಲಿರುವ ಮುಂದಿನ ಬಹುನಿರೀಕ್ಷಿತ ಚಿತ್ರ ‘ದೃಶ್ಯಂ: ದಿ ಕನ್ಕ್ಲೂಷನ್’ ಆಗಿದ್ದು, ಇದು ಅಕ್ಟೋಬರ್ 2ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಚುನಾವಣಾ ಆಯೋಗ ವಿರುದ್ಧ "ಕೈ" ಪಡೆ ಪ್ರತಿಭಟನೆಬೆಳಗಾವಿಯಲ್ಲಿ ನಡೆದ ಬೃಹತ ಪ್ರತಿಭಟನೆಯಲ್ಲಿ ಭಾಗಿಯಾದ ಖಾನಾಪುರ ಕಾಂಗ್ರೆಸ್ ಕಾರ್ಯಕರ್ತರು ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ – 8 ಸೆಕೆಂಡಲ್ಲಿ ಕುಸಿದ ಪರ್ವತ; ವಿವಿಧೆಡೆ 21 ಮಂದಿ ಸಾವುಶಿಕಾರಿಪುರದಲ್ಲಿ ಸೆ.30 ರಂದು ಭಾರತ್ ಜೋಡೋ ನೆನಪಿನಯಾತ್ರೆ: ಮಧು ಬಂಗಾರಪ್ಪ16 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆಲವ್ವರ್‌ ಮದುವೆಯಾಗಲು 21 ವಯಸ್ಸಾಗುವವರೆಗೆ ಕಾಯುವಂತೆ ಹೇಳಿದ ತಂದೆಯನ್ನೇ ಗುಂಡಿಕ್ಕಿ ಕೊಂದ 18 ವರ್ಷದ ಪುತ್ರಮಹಿಳಾ ಮೀಸಲಾತಿ ಸನ್ನಿಹಿತ – ತುಮಕೂರಿನಲ್ಲಿ ಪುತ್ರಿಯರನ್ನು ರಾಜಕೀಯ ಅಖಾಡಕ್ಕೆ ಅಣಿಗೊಳಿಸುತ್ತಿರುವ ನಾಯಕರುತೆರಿಗೆ ವಂಚನೆ ಆರೋಪ – ನಟಿ ರಕುಲ್ ಪ್ರೀತ್ ಸಿಂಗ್‌ಗೆ ಐಟಿ ಶಾಕ್‌ಆಸ್ತಿಗಾಗಿ ತಮ್ಮನನ್ನೇ ಚಾಕು ಇರಿದು ಹತ್ಯೆಗೈದ ಅಣ್ಣಗವಿಶ್ರೀಗಳಿಗೆ ಮೈಸೂರು ದಸರಾ ಅಧಿಕೃತ ಆಹ್ವಾನ ನೀಡಿದ ಶಿವರಾಜ್ ತಂಗಡಗಿ