LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಂಗಾರತಿ ಮಾದರಿ ಕಾವೇರಿ ಮಾತೆಗೆ ಆರತಿ; ಪೂಜೆ ನೆರವೇರಿಸಿದ ಸಿಎಂ ಡಿಕೆಶಿ

Advertisement

ಮಂಡ್ಯ: ವಾರಣಾಸಿಯ ಗಂಗಾರತಿಯ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾವೇರಿ ನದಿಗೆ ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾವೇರಿ ಆರತಿ ಕಾರ್ಯಕ್ರಮದ ಎರಡನೇ ವರ್ಷದ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ.

ಕೆಆರ್‌ಎಸ್‌ಗೆ ಆಗಮಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ಆರತಿ ಮಾಡುವ ಮೂಲಕ ಕಾವೇರಿ ಆರತಿಗೆ ಚಾಲನೆ ನೀಡಿದರು. ಡಿಕೆಶಿ ಪತ್ನಿ ಉಷಾ ಅವರು ಕೂಡ ಕಾವೇರಿ ಆರತಿಯಲ್ಲಿ ಭಾಗವಹಿಸಿದ್ದರು. ಸುತ್ತೂರು ಶ್ರೀಗಳುವ, ನಿಶ್ಚಲಾನಂದನಾಥ ಸ್ವಾಮಿ, ಚುಂಚನಗಿರಿ ಮೈಸೂರು ಶಾಖ ಮಠದ ಸೋಮನಾಥ ಸ್ವಾಮೀಜಿ ಹಾಗೂ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಶಾಸಕ ರಮೇಶ್ ಬಂಡೀಸಿದ್ದೇಗೌಡ ಸೇರಿ ಅನೇಕರು ಭಾಗವಹಿಸಿದ್ದರು.

ದಕ್ಷಿಣ ಭಾರತದ ಶೈಲಿಯಲ್ಲಿ ಕಾವೇರಿ ಆರತಿ ಆರಂಭವಾಯಿತು. ಕೆಆರ್‌ಎಸ್ ಬೃಂದಾವನದಲ್ಲಿ ಮನಸೂರೆಗೊಂಡಿತು. ಸಾವಿರಾರು ಜನರು ಭಕ್ತಿಯ ಪರಾಕಾಷ್ಠೆಯಲ್ಲಿ ಆರತಿ ವೀಕ್ಷಣೆ ಮಾಡಿದರು. ವಾರಣಾಸಿ ವೈದಿಕರ ತಂಡದಿಂದ ಕಾವೇರಿ ಆರತಿ ನೆರವೇರಿತು. ಮೋಹನ್ ಮಿಶ್ರಾ ನೇತೃತ್ವದ ಅರ್ಚಕರ 15 ಜನರ ತಂಡದಿAದ ಕಾವೇರಿ ಮಾತೆಗೆ ಆರತಿ ನಡೆಸಲಾಯಿತು.

ಕಾವೇರಿ ಆರತಿ ಬಳಿಕ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಹಲವು ಅಡೆತಡೆಗಳ ನಡುವೆ ಇಂದು ಕಾವೇರಿ ಆರತಿ ಜರುಗಿದೆ. ಕಳೆದ ಬಾರಿ ಸಾಕಷ್ಟು ತಪ್ಪುಗಳಾಗಿತ್ತು. ಈ ಬಾರಿ ಆ ತಪ್ಪುಗಳನ್ನ ಸರಿಪಡಿಸಿಕೊಂಡು ಕಾವೇರಿ ಆರತಿ ನೆರವೇರಿದೆ. 100 ದಿನಗಳಲ್ಲಿ ನಮ್ಮ ಸಿಎಂ ಜನಪರ ಕೆಲಸ ಮಾಡಿದ್ದಾರೆ. ಬಹಳ ಜನಕ್ಕೆ ಇದು ಹೊಟ್ಟೆ ಕಿವುಚುಕೊಳ್ಳುವಂತಾಗಿದೆ. ಯಾರು ಏನೇ ಅಂದ್ಕೊಳ್ಳಿ ಸಮಾಜಕ್ಕೆ ತೃಪ್ತಿಯಾಗುವಂತೆ ಕಲಸ ಮಾಡಿದ್ರೆ ಸಾಕು ಎಂದರು.

ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, 2ನೇ ವರ್ಷದ ಕಾವೇರಿ ಆರತಿ. ಕಾವೇರಿ ಆರತಿ ಉದ್ದೇಶ ಉಪಕಾರ ಸ್ಮರಣೆ. ನಮ್ಮೆಲ್ಲರ ತಾಯಿ ಕಾವೇರಿ. ಅನ್ನವನ್ನು ನೀಡುತ್ತಿದ್ದಾಳೆ. ಕನ್ನಂಬಾಡಿ ಕಟ್ಟೆ ಅನ್ನದ ತಟ್ಟೆ. ಕಾವೇರಿ ಮಡಿಲಲ್ಲಿ ಒಂದು ಮಗು ಬೆಳೆದರೆ ಇಡೀ ಕರುನಾಡು ಬೆಳೆಯುತ್ತದೆ. ಪ್ರತಿಯೊಂದು ಹನಿ ನೀರು ಉಳಿಸಿಕೊಳ್ಳಲು ಹೋರಾಟ. ಕಾವೇರಿ ನಮ್ಮ ಸಂಸ್ಕೃತಿ, ಪ್ರಕೃತಿ. ನಮ್ಮ ಬದುಕಿನ ದೊಡ್ಡ ಶಕ್ತಿ ಕಾವೇರಿ. ನೀರು ಉಳಿದರೆ ನಾಡು ಉಳಿಯುತ್ತದೆ. ಕಾವೇರಿ ಉಳಿದರೆ ಕರುನಾಡು ಉಳಿಯುತ್ತದೆ. ಚಾಮುಂಡೇಶ್ವರಿ ತಾಯಿ ಶಕ್ತಿಯ ಸಂಕೇತ. ಕಾವೇರಿ ತಾಯಿ ಸಮೃದ್ಧಿಯ ಸಂಕೇತ. ಆ ತಾಯಿಗೆ ನಮನ ಸಲ್ಲಿಸಲು ಪವಿತ್ರ ಕಾರ್ಯಕ್ರಮ ಆಯೋಜನೆ. ಕಾವೇರಿ ಆರತಿ ಕಾರ್ಯಕ್ರಮವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಂಗಾರತಿ ಮಾದರಿ ಕಾವೇರಿ ಮಾತೆಗೆ ಆರತಿ; ಪೂಜೆ ನೆರವೇರಿಸಿದ ಸಿಎಂ ಡಿಕೆಶಿಕ್ಷೇತ್ರ ಪುನರ್‌ವಿಂಗಡನೆ ಮಸೂದೆ ಮಂಡನೆಗೆ ಮುನ್ನ ಸರ್ವಪಕ್ಷ ಸಭೆ ನಡೆಸಿ – ಮೋದಿಗೆ 4ನೇ ಬಾರಿಗೆ ಖರ್ಗೆ ಪತ್ರಕೆಂಪೇಗೌಡ ಏರ್‌ಪೋರ್ಟ್‌ನಲ್ಲೂ ಭಿಕ್ಷಾಟನೆ ಕಾಟ; ಇಬ್ಬರ ಬಂಧನಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು3 ಲಕ್ಷ ಲಂಚ ಪಡೆಯುವಾಗ ʻಲೋಕಾʼ ದಾಳಿ – ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಎಸ್‌ಐಟಿ ತನಿಖೆಯಾಗಲಿ: ಪ್ರಹ್ಲಾದ್ ಜೋಶಿ ಆಗ್ರಹಪಿಜಿಸಿಇಟಿ ಫಲಿತಾಂಶ ಪ್ರಕಟ, ಶುಲ್ಕ ಕಟ್ಟಲು ಅ.19 ಕೊನೆ ದಿನ: ಕೆಇಎರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ – ಹೊಸ ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ: ಸಿಎಂಹಾವು ಕಚ್ಚಿ ಎರಡು ವರ್ಷದ ಮಗು ದುರ್ಮರಣನೆಲಮಂಗಲ ಹೆದ್ದಾರಿಯಲ್ಲಿ ಹಿಟ್‌ & ರನ್‌ಗೆ ಕೇರಳದ ಯುವತಿ ಬಲಿ