ವಿಜಯಪುರ: ಜಿಲ್ಲೆಯಲ್ಲಿ ಚಾಕಲೇಟ್ ಕದ್ದಿದ್ದಕ್ಕೆ ಬಾಲಕನಿಗೆ ಥಳಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಚಾಕಲೇಟ್ ಕದಿದ್ದಕ್ಕೆ ಅಂಗಡಿಯ ಮಾಲೀಕ ಅಶೋಕ್ ಪತ್ತಾರ ಎಂಬಾತ ಬಾಲಕನಿಗೆ ಥಳಿಸಿದ್ದ. ಇದರ ಬೆನ್ನಲ್ಲೇ ಬಾಲಕನ ತಂದೆ ರೆಹಮಾನ್ ವಾಲೀಕಾರ್ ಎಂಬುವವರು ದೂರು ನೀಡಿದ್ದರು.
ದೂರಿನನ್ವಯ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿ ಅಶೋಕ್‌ನನ್ನು ಬಂಧಿಸಿದ್ದಾರೆ.




