LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ನಿಗಮಗಳಿಗೆ 8 ಸಾವಿರ ಕೋಟಿ ನಷ್ಟ

Advertisement

ಬೆಂಗಳೂರು: ಕೇಂದ್ರ ಸರ್ಕಾರ ನಾಲ್ಕು ಬಾರಿ ಡೀಸೆಲ್ ಮತ್ತು ಇತರೆ ತೈಲೋತ್ಪನ್ನಗಳ ಬೆಲೆ ಹೆಚ್ಚಳ ಮಾಡಿದ್ದರಿಂದಾಗಿ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ವಾರ್ಷಿಕ 8 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಗುರುವಾರ ಬರ ಪರಿಸ್ಥಿತಿ ಬಗ್ಗೆ ನಡೆದ ಚರ್ಚೆಯ ವೇಳೆ ಹೇಳಿಕೆ ನೀಡಿದ ಅವರು, ಡೀಸೆಲ್ ಬೆಲೆ ಹೆಚ್ಚಳವಾಗಿದ್ದರೂ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳಿಗೆ ವಾರ್ಷಿಕ 8 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದರು. 

ಇದರ ಪರಿಣಾಮ ನಾಲ್ಕೂ ನಿಗಮಗಳ ಸಿಬ್ಬಂದಿಗೆ ಸಂಬಳ ಕೊಡಲು ಹಣವಿಲ್ಲದಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನಾಲ್ಕು ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡೋಣವೆಂದರೆ ವಿರೋಧ ಪಕ್ಷಗಳ ಭಯ ಕಾಡುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

ಒಂದು ವೇಳೆ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿದರೆ ಮೊದಲು ವಿರೋಧ ಬರುವುದು ವಿರೋಧ ಪಕ್ಷಗಳಿಂದಲೇ. ಆದಾಗ್ಯೂ, ಸಂಸ್ಥೆಗಳ ಉಳಿವು ಮತ್ತು ಪ್ರಯಾಣಿಕರಿಗೆ ಇನ್ನಷ್ಟು ಸೇವೆ ಕಲ್ಪಿಸುವ ದೃಷ್ಟಿಯಿಂದ ಪ್ರಯಾಣ ದರಗಳನ್ನು ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಮುಖ್ಯಮಂತ್ರಿಗಳ ಮನವೊಲಿಕೆ ಮಾಡುತ್ತಿದ್ದೇವೆ ಎಂದು ಸಾರಿಗೆ ಸಚಿವರು ತಿಳಿಸಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಯಲ್ಲಿ ನಿಗೂಢ ಸ್ಫೋಟ – ಗೋಡೆ ಕುಸಿದು ಅಡುಗೆ ಸಿಬ್ಬಂದಿಗೆ ಗಾಯಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ನಿಗಮಗಳಿಗೆ 8 ಸಾವಿರ ಕೋಟಿ ನಷ್ಟ1 ಲಕ್ಷ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಗ್ನಿಶಾಮಕ ಅಧಿಕಾರಿರಾಜ್ಯದ 50 ಲಕ್ಷ ರೈತರಿಗೆ 2,500 ಇನ್‌ಪುಟ್ ಸಬ್ಸಿಡಿ: ಪರಮೇಶ್ವರ್ ಘೋಷಣೆಸಾವಿರಾರು ಮತದಾರರ ಹೆಸರು ತೆಗೆಯಲು ಅಭಯ್ ಪಾಟೀಲ್ ಪತ್ರ: ಬಂಧನಕ್ಕೆ ಹರಿಪ್ರಸಾದ್ ಆಗ್ರಹಲೋಕಾಯುಕ್ತರಿಂದ ಫೋನ್ ಪೇ ಪರಿಶೀಲನೆ, ಅಧಿಕಾರಿಗಳು ತಬ್ಬಿಬ್ಬುದ್ವಿಚಕ್ರ ವಾಹನಕ್ಕೆ ಸಿಮೆಂಟ್ ಲಾರಿ ಡಿಕ್ಕಿ – ವಿದ್ಯಾರ್ಥಿನಿ ದಾರುಣ ಸಾವುಪರಪ್ಪನ ಅಗ್ರಹಾರ ಜೈಲಿನ ವಾರ್ಡರ್‌ನಿಂದ ಹಲ್ಲೆ – ಡಾಬಾ ಮಾಲೀಕ ಸಾವುತಮಿಳುನಾಡಿಗೆ ಕಾವೇರಿ ನೀರು – ಸರ್ಕಾರದಿಂದ ನ್ಯಾಯಾಲಯದಲ್ಲಿ ಮೇಲ್ಮನವಿ: ಸಿಎಂ ಡಿಕೆಶಿಚೆನ್ನೈ – ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ; ಮೂವರು ದುರ್ಮರಣ