LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೈದ್ಯಕೀಯದಲ್ಲಿ 384 ಸೀಟು ಉಳಿಕೆ, ದಂತ ವೈದ್ಯಕೀಯದ ಎಲ್ಲಾ ಸೀಟು ಹಂಚಿಕೆ: ಕೆಇಎ

Advertisement

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಪ್ರಕಟಿಸಿದೆ.

ಎಂಸಿಸಿ ಮತ್ತು ಕೆಇಎ – ಎರಡೂ ಕೌನ್ಸೆಲಿಂಗ್ ಗಳಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಒಂದು ವೇಳೆ ಎಂಸಿಸಿ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಂತಹವರು ಸೆ.14ರ ಸಂಜೆ 5ಗಂಟೆವರೆಗೆ ಚಾಯ್ಸ್- 4 ಆಯ್ಕೆ‌‌ ಮಾಡಿಕೊಂಡು ಕೆಇಎಯಿಂದ ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. 

ಈ ರೀತಿ ಚಾಯ್ಸ್-4 ಹಾಕಿ‌ ಹೊರ ಹೋಗುವ ಅಭ್ಯರ್ಥಿಗಳಿಂದ ತೆರವಾಗುವ ಸೀಟುಗಳನ್ನು 2ನೇ ಸುತ್ತಿಗೇ ಪರಿಗಣಿಸಿ, ಮತ್ತೊಮ್ಮೆ ಸೀಟು ಹಂಚಿಕೆ  ಮಾಡಿ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ವೈದ್ಯಕೀಯ ಕೋರ್ಸ್ ನಲ್ಲಿ ಒಟ್ಟು 12,010 ಸೀಟುಗಳ ಪೈಕಿ 11,626 ಸೀಟು ಹಂಚಿಕೆಯಾಗಿವೆ. ಮ್ಯಾನೇಜ್ಮೆಂಟ್ ಕೋಟಾದ ಇನ್ನೂ 384 ಸೀಟು ಬಾಕಿ ಉಳಿದಿವೆ. ಆದರೆ ದಂತ ವೈದ್ಯಕೀಯ ಕೋರ್ಸ್ ನಲ್ಲಿ ಎಲ್ಲ 2,689 ಸೀಟುಗಳೂ ಹಂಚಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಗೆ ಖಂಡನೆ – ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪಂಜಿನ ಮೆರವಣಿಗೆಉದ್ಘಾಟನೆಗೂ ಮುನ್ನವೇ ಕಿತ್ತುಬಂದ ಕಾಂಕ್ರೀಟ್; 3 ಕೋಟಿ ವಸತಿ ನಿಲಯದ ಕಳಪೆ ಕಾಮಗಾರಿ ಬಯಲುಪಾವಗಡದಲ್ಲಿ ನಕಲಿ ನಕ್ಸಲ್ ಕಾಟ; 5 ಲಕ್ಷಕ್ಕೆ ಬೇಡಿಕೆ ಇಟ್ಟು ಬೆದರಿಕೆ8,000 ಕ್ಯೂಸೆಕ್ ನೀರು ಹರಿಯುತ್ತಿದ್ರೂ 6,000 ಕ್ಯೂ. ನೀರು ಬಿಡ್ತಿಲ್ಲ ಎಂದ ಚಲುವರಾಯಸ್ವಾಮಿಬರಪೀಡಿತ ತಾಲ್ಲೂಕುಗಳಲ್ಲಿ ಇರುವ ಏತ ನೀರಾವರಿ ಯೋಜನೆಗಳ ಮೂಲಕ ಕೆರೆ ತುಂಬಿಸುವಿಕೆಗೆ ಆದ್ಯತೆ ನೀಡಿ: ಅಜಯ್ ಸಿಂಗ್ಇಡಿ ದಾಳಿ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಭೇಟಿ ಮಾಡಿದ ಸಂತೋಷ್‌ ಲಾಡ್‌ರಾಜಕೀಯ ನಿವೃತ್ತಿ ಕುರಿತು ಬಹಿರಂಗ ಹೇಳಿಕೆ ಬೇಡ – ಸಿದ್ದರಾಮಯ್ಯಗೆ ರಾಹುಲ್ ಸಲಹೆಗೌರಿ-ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಸಿಹಿಸುದ್ದಿ – KSRTC ಯಿಂದ ಹೆಚ್ಚುವರಿ 2,400 ಬಸ್‌ಗಳ ವ್ಯವಸ್ಥೆವೈದ್ಯಕೀಯದಲ್ಲಿ 384 ಸೀಟು ಉಳಿಕೆ, ದಂತ ವೈದ್ಯಕೀಯದ ಎಲ್ಲಾ ಸೀಟು ಹಂಚಿಕೆ: ಕೆಇಎಐದೇ ದಿನಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಫಲಿತಾಂಶ ಪ್ರಕಟ: ಕೆಇಎ