LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಾವನಾ ಹೊಸ ಲುಕ್ – ‘ಡಿಯರ್ ಹಸ್ಬೆಂಡ್’ ಚಿತ್ರತಂಡ ಸೇರಿದ ನಟಿ

Advertisement
Advertisement
Advertisement

ನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಗ್ಲಾಮರಸ್ ಮತ್ತು ಟ್ರೆಡೀಷನಲ್ ಪಾತ್ರಗಳಲ್ಲಿ ಹೆಚ್ಚಾಗಿ ಮಿಂಚಿದ್ದ ನಟಿ ಪಾವನಾ ಗೌಡ, ಇದೀಗ ರಗಡ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಹೌದು, ಆರಂಭದಿಂದ ಇಲ್ಲಿಯವರೆಗೂ ಹೆಚ್ಚಾಗಿ ಸೌಂದರ್ಯ ಮತ್ತು ಸೌಮ್ಯ ಸ್ವಭಾವದ ಹುಡುಗಿಯ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಪಾವನಾ ಗೌಡ, ಈಗ ಉತ್ತರ ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ನಟಿ ಪಾವನಾ ಗೌಡ ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ. 

 

‘ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ‘ಡಿಯರ್ ಹಸ್ಬೆಂಡ್’ ಚಿತ್ರದ ತೆರೆ ಹಿಂದಿನ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ಸದ್ದಿಲ್ಲದೆ, ‘ಡಿಯರ್ ಹಸ್ಬೆಂಡ್’ ಚಿತ್ರದ ಎರಡು ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಇದರ ನಡುವೆಯೇ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಂದಿದ್ದು, ನಟಿ ಪಾವನಾ ಗೌಡ ಅಧಿಕೃತವಾಗಿ ‘ಡಿಯರ್ ಹಸ್ಬೆಂಡ್’ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ.

ಇನ್ನು ಚಿತ್ರತಂಡ ಮತ್ತು ನಟಿ ಪಾವನಾ ಗೌಡ ಎರಡೂ ಕಡೆಯಿಂದ ಖಚಿತಪಡಿಸಿರುವ ಮಾಹಿತಿಯಂತೆ, ‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ನಟಿ ಪಾವನಾ ಗೌಡ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರ. ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಪಾವನಾ ಗೌಡ, ‘ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವಂತ ಪಾತ್ರ ಇದಾಗಿದೆ. ಒಬ್ಬ ಜವಾಬ್ದಾರಿಯುತ ಮಹಿಳಾ ಪೊಲೀಸ್ ಅಧಿಕಾರಿ ಹೇಗಿರುತ್ತಾಳೆ? ಅವಳಿಗೆ ಏನೇನು ಸವಾಲುಗಳಿರುತ್ತವೆ? ತನ್ನ ಕೆಲಸವನ್ನು ಹೇಗೆ ನಿಭಾಯಿಸುತ್ತಾಳೆ? ಎಂಬುದನ್ನು ನನ್ನ ಪಾತ್ರ ತೋರಿಸುತ್ತದೆ. ಇದು ನನಗಂತೂ ಇದೊಂದು ಚಾಲೆಂಜಿಂಗ್ ಆಗಿರುವಂಥ ಪಾತ್ರ. ಖಡಕ್ ಡೈಲಾಗ್ಸ್ ಜೊತೆಗೆ ಆ್ಯಕ್ಷನ್ಸ್ ಕೂಡ ಈ ಪಾತ್ರದಲ್ಲಿ ನನಗಿದೆ’ ಎಂದು ಪಾತ್ರ ಪರಿಚಯ ಮಾಡಿಕೊಟ್ಟಿದ್ದಾರೆ.

‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ಪಾವನಾ ಅವರ ಪಾತ್ರದ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ), ‘ಇದೊಂದು ತುಂಬ ಪ್ರಮುಖವಾದ ಪಾತ್ರ ಸಾಕಷ್ಟು ಹುಡುಕಾಟದ ನಂತರ ಈ ಪಾತ್ರಕ್ಕೆ ಅಂತಿಮವಾಗಿ ಪಾವನಾ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವರು ಕೂಡ ಖುಷಿಯಿಂದ ಈ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ‘ಡಿಯರ್ ಹಲ್ಬೆಂಡ್’ ಚಿತ್ರದ ಒಂದಷ್ಟು ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಮುಂದಿನ ಹಂತದ ಚಿತ್ರೀಕರಣದಲ್ಲಿ ಪಾವನಾ ಗೌಡ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಮೂಲಕ ಅವರಿಗೆ ಮತ್ತೊಂದು ಇಮೇಜ್ ಬರಬಹುದು. ಅಷ್ಟರ ಮಟ್ಟಿಗೆ ಮಹಿಳಾ ಪ್ರಧಾನ ಪಾತ್ರ ಇದಾಗಿದೆ’ ಎಂದು ವಿವರಣೆ ನೀಡಿದ್ದಾರೆ.

ಇನ್ನು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ನಟರಾದ ಸೂರಜ್ ಗೌಡ, ಪ್ರವೀಣ್, ಕುಮಾರ ಬಂಗಾರಪ್ಪ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಮೋದ್‌ ಮರವಂತೆ ಸಾಹಿತ್ಯ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಪಿಕೆಹೆಚ್ ದಾಸ್ ಛಾಯಾಗ್ರಹಣ, ಬಿ. ಎಸ್. ಕೆಂಪರಾಜ್ ಚಿತ್ರಕ್ಕೆ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆಯಲ್ಲಿದೆ ಚಿತ್ರತಂಡ. ಸದ್ಯ ಭರದಿಂದ ‘ಡಿಯರ್ ಹಸ್ಬೆಂಡ್’ ಚಿತ್ರದ ಕೆಲಸಗಳನ್ನು ನಡೆಸುತ್ತಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ‘ಡಿಯರ್ ಹಸ್ಬೆಂಡ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.

‘ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ತುಂಬಾ ಎಕ್ಸೈಟ್ ಆಗಿದ್ದೇನೆ. ಒಬ್ಬ ಮಹಿಳಾ ಪೊಲೀಸ್ ತನಿಖಾಧಿಕಾರಿ ಹೇಗಿರುತ್ತಾಳೆ, ಅವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ನನ್ನ ಪಾತ್ರ ಹೇಳುತ್ತದೆ. ಇದು ನೈಜತೆಗೆ ತುಂಬ ಹತ್ತಿರವಿರುವಂಥ ಪಾತ್ರ. ತುಂಬ ಅನುಭವಿ ತಂಡದ ಜೊತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನಗೂ ಕೂಡ ಈ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ, ಕುತೂಹಲ ಎರಡೂ ಇದೆ. ತೆರೆಮೇಲೆ ನನ್ನ ಪಾತ್ರ ಹೇಗೆ ಕಾಣುತ್ತದೆ ಎಂಬುದನ್ನು ನಾನು ಕೂಡ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ ಪಾವನಾ ಗೌಡ.

‘ನಮ್ಮ ‘ಡಿಯರ್ ಹಸ್ಬೆಂಡ್’ ಸಿನಿಮಾದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಪಾತ್ರ ತುಂಬ ಮಹತ್ವದ್ದು. ಇಡೀ ಸಿನಿಮಾದ ಕಥೆ ಈ ಪಾತ್ರದ ಮೂಲಕ ಅನಾವರಣವಾಗುತ್ತದೆ. ಇಂಥದ್ದೊಂದು ಪಾತ್ರವನ್ನು ಪಾವನಾ ಗೌಡ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸದಲ್ಲಿ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ. ಅವರಿಗೂ ಈ ಪಾತ್ರ ತುಂಬ ಇಷ್ಟವಾಗಿದೆ. ಶೀಘ್ರದಲ್ಲಿಯೇ ಪಾವನಾ ಗೌಡ ಅವರ ಪಾತ್ರದ ಚಿತ್ರೀಕರಣ ಶುರು ಮಾಡಲಿದ್ದೇವೆ. ಪಾವನ ಅವರ ಹೊಸ ಗೆಟಪ್ ಬಗ್ಗೆ ನಮಗೂ ಸಾಕಷ್ಟು ನಿರೀಕ್ಷೆಯಿದೆ’ ಅನ್ನುವುದು ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ಮಾತು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ಲೈವುಡ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಸುಟ್ಟು ಭಸ್ಮಬೆಳ್ಳಂದೂರು ಪೊಲೀಸರ ಭರ್ಜರಿ ಬೇಟೆ – ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡ್ತಿದ್ದ 800 ಕೆಜಿ ಜಿಲೆಟಿನ್ ಜಪ್ತಿಮದುವೆ ಮನೆಯಲ್ಲೂ ʻಡಿ ಬಾಸ್‌, ಡಿ ಬಾಸ್‌ʼ ಜೈಕಾರ – ಫ್ಯಾನ್ಸ್‌ಗೆ ಬುದ್ಧಿ ಹೇಳಿದ ವಿಜಯಲಕ್ಷ್ಮಿಬಿಜೆಪಿ ಐಟಿ ಸೆಲ್‌ನಿಂದ ಅಮಿತ್ ಮಾಳವೀಯ ಔಟ್‌, ದೀಪಕ್ ಮ್ಹಾಸ್ಕೆಗೆ ಜವಾಬ್ದಾರಿISI ಬೆಂಬಲಿತ ಉಗ್ರ ಜಾಲದ ವಿರುದ್ಧ ಕಾರ್ಯಾಚರಣೆ – ಕರ್ನಾಟಕದಲ್ಲಿ ಮೂವರು ವಶಕ್ಕೆದರ್ಶನ್‌ಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ – ಖುದ್ದು ಹಾಜರಾತಿ ಅರ್ಜಿ ವಜಾಪ್ರಧಾನಿ ಮೋದಿ ಭೇಟಿಯಾದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ಪಾವನಾ ಹೊಸ ಲುಕ್ – ‘ಡಿಯರ್ ಹಸ್ಬೆಂಡ್’ ಚಿತ್ರತಂಡ ಸೇರಿದ ನಟಿಕೋಟೇಶ್ವರದಲ್ಲಿ ಗಮನಸೆಳೆದ ನಾಗಬನ ಮರಳು ಶಿಲ್ಪಮದುವೆಯಾಗುವಂತೆ ಒತ್ತಾಯ – ಪ್ರೇಯಸಿಯನ್ನು ಕೊಂದು ಗೋಣಿ ಚೀಲದಲ್ಲಿ ಶವ ಬಚ್ಚಿಟ್ಟು ಪ್ರಿಯಕರ ಪರಾರಿ