ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ಜಕನಾಯ್ಕನಕೊಪ್ಪ ಗ್ರಾಮದ ಸದ್ಗುರು ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ 29 ನೇ ಜಾತ್ರಾ ಮಹೋತ್ಸವದ ಹಾಗೂ ನೂತನ ಬ್ರಹ್ಮ ರಥದ ಲೋಕಾರ್ಪಣೆ ಸದ್ಗುರು ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ನೆರವೆರಿತು.
ಜಕನಾಯ್ಕನಕೊಪ್ಪ ಗ್ರಾಮದ ಉತ್ತರಾಧಿಕಾರಿಯನ್ನಾಗಿ ಮಾತೋಶ್ರೀ ಶಿವಯೋಗಿನಿ ತಾಯಿ ಯವರನ್ನು ನೇಮಕ ಮಾಡಿ ಹಾಗೂ ನೂತನವಾಗಿ ನಿರ್ಮಿಸಲಾದ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು. ಸಂಜೆ 5-00 ಗಂಟೆಗೆ ಸರ್ವ ಮಹಾತ್ಮರ ಹಾಗೂ ಜಕನಾಯ್ಕನಕೊಪ್ಪ ಗ್ರಾಮದ ಸದ್ಭಕ್ತರು, ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಸಮ್ಮುಖದಲ್ಲಿ ಬ್ರಹ್ಮ ಮಹಾರಥೋತ್ಸವವು ಅತೀ ವಿಜೃಂಭನೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಉತ್ತರಾಧಿಕಾರಿಯಾದ ಮಾತೋಶ್ರೀ ಶಿವಯೋಗಿನಿ ತಾಯಿ , ಚಿಕ್ಕುಂಬಿ ಮಠದ ಶ್ರೀ ಶ್ರೀ.ಬ್ರ.ನಿ ಅಭಿನವ ನಾಗಲಿಂಗ ಮಹಾಸ್ವಾಮಿಗಳು, ಶ್ರೀ ಗಾಳೇಶ್ವರ ಮಠ .ಮಲ್ಲಾಪುರ ಗ್ರಾಮದ ಶ್ರೀ ಪ್ರೋ.ಬ.ನಿ ಚಿದಾನಂದ ಮಹಾಸ್ವಾಮಿಗಳು, ಅಥಣಿ ಮಠದ ಶ್ರೀ ಶಿವಪಂಚಾಕ್ಷರಿ ಮಹಾಸ್ವಾಮಿಗಳು ಮಾತೋಶ್ರೀ ಬ್ರಹ್ಮಗಾಯತ್ರಿ ತಾಯಿ, ಸಿದ್ದಾರೂಢ ಮಠ,ಮೊರಬ, ಮಾತೋಶ್ರೀ ಗೀತಾ ಮಾತಾ ಸಿದ್ದಾರೂಢ ಮಠ ಬಾಗಲಕೊಟ, ಮಾತೋಶ್ರೀ ಮೈತ್ರಾ ತಾಯಿ ಸಿದ್ದಾರೂಢ ಮಠ ಮೊರಬ, ಮಾತೋಶ್ರೀ ಅಕ್ಕಮಹಾದೇವಿ ತಾಯಿ ಶಿವಯೋಗಾಶ್ರಮ ಶಿರೋಳ, ಹಾಗೂ ಜಕನಾಯ್ಕನಕೊಪ್ಪ ಗ್ರಾಮದ ಮತ್ತು ಸುತ್ತಮುತ್ತಲಿನ ಸಮಸ್ತ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ: ಬಸವರಾಜ ಹಟ್ಟಿ.