spot_img
spot_img
spot_img
18.7 C
Belagavi
Monday, September 26, 2022
spot_img

20 ದಿನಗಳ ನಂತರ ಸ್ವಗ್ರಾಮಕ್ಕೆ ತಲುಪಿದ ನವೀನ್ ಮೃತದೇಹ : ಮುಗಿಲು ಮುಟ್ಟಿದ ಆಕ್ರಂದನ

spot_img
spot_img

For Breaking News Download App

ಹಾವೇರಿ : 20 ದಿನಗಳ ನಂತರ ಉಕ್ರೇನ್ ನಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಸ್ವಗ್ರಾಮ ಹಾವೇರಿ ಜಿಲ್ಲೆಯ ಚಳಗೇರಿಗೆ ತರಲಾಗಿದೆ. ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಚಳಗೇರಿ ಬಸ್ ನಿಲ್ದಾಣದವರೆಗೆ ಅಂತಿಮಯಾತ್ರೆ ನಡೆಸಲಾಗುವುದು.

ನಂತರ ಸಂಜೆ 4 ಗಂಟೆಗೆ ದಾವಣಗೆರೆ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಚಳಗೇರಿಗೆ ನವೀನ್ ಮೃತದೇಹ ತರುತ್ತಿದ್ದಂತೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಗ್ರಾಮಸ್ಥರು, ಅಧಿಕಾರಿಗಳು ಸೇರಿದಂತೆ ಅಪಾರ ಜನ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ.

ಮಗನ ಮೃತದೇಹವನ್ನು ಕಂಡು ತಂದೆ-ತಾಯಿ , ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗುತ್ತಿದೆ. ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -