ನವದೆಹಲಿ : ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಹಿನ್ನೆಲ್ಲೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 29 ನಾರಿಯರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 2020 -2021 ರ ನಾರಿ ಶಕ್ತಿ ಪುರಸ್ಕಾರಗಳನ್ನು ಪ್ರದಾನ ಮಾಡಿದರು.ವಿಶೇಷವಾಗಿ ದುರ್ಬಲ ಮತ್ತು ಅಂಚಿನಲ್ಲಿರುವವರಿಗಾಗಿ ಮಾಡಿದ ಮಹಿಳೆಯರ ಅಸಾಧಾರಣ ಕಾರ್ಯವನ್ನು ಗುರುತಿಸಿ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಇನ್ನು ಈ ಪುರಸ್ಕಾರವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಹಿಳೆಯರ ಜೀವನವನ್ನು ಸುಧಾರಿಸುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಮಾಡಿದ ಅಸಾಧಾರಣ ಕೊಡುಗೆಗಳಿಗೆ ಕಾರಣವಾದವರಿಗೆ ನೀಡಲಾಗುತ್ತಿದೆ.

ಉದ್ಯಮಶೀಲತೆ, ಕೃಷಿ, ಸಾಮಾಜಿಕ ಕೆಲಸ , ಶಿಕ್ಷಣ ಮತ್ತು ಸಾಹಿತ್ಯ, ಸೇರಿ ಮಹಿಳಾ ಸಂಬಲೀಕರಣಕ್ಕೆ ಸಹಕರಿಸಿದವರಿಗೆ ಈ ನಾರಿ ಶಕ್ತಿ ಪ್ರಶಸ್ತಿ ನೀಡಲಾಗುತ್ತದೆ. ಇನ್ನು ಹೆಮ್ಮೆಯ ಸಂಗತಿ ಎಂದರೇ ಕರ್ನಾಟಕದ ಹೆಮ್ಮೆಯ ಕನ್ನಡತಿಯರು ಆದ ಶೋಭಾ ಗಸ್ತಿ, ನಿವೃತಿ ರೈಯವರು ಕೂಡ ಈ ಪ್ರಶಸ್ತಿ ಭಾಜನರಾಗಿದ್ದಾರೆ.