spot_img
spot_img
spot_img
21.1 C
Belagavi
Friday, September 30, 2022
spot_img

20 ಲಕ್ಷ ರೂ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕಿ ಹೆಬ್ಬಾಳಕರ್

spot_img

ವರದಿ : ರತ್ನಾಕರ್ ಗೌಂಡಿ

ಬೆಳಗಾವಿ :  20 ಲಕ್ಷ ರೂ. ವೆಚ್ಚದಲ್ಲಿ ಬೆಕ್ಕಿನಕೇರಿ ರಸ್ತೆಗಳ ಅಭಿವೃದ್ಧಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮಂಗಳವಾರ ಪೂಜೆ ನೆರವೇರಿಸಿದರು.

ಬೆಕ್ಕಿನಕೇರಿ ಗ್ರಾಮದ ನಾಗನಾಥ್‌ ಗಲ್ಲಿ, ಲಕ್ಷ್ಮೀ ಗಲ್ಲಿ ಹಾಗೂ ಗವಳಿ ಗಲ್ಲಿ ಈ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ‌ಇಲಾಖೆಯ ವತಿಯಿಂದ 20 ಲಕ್ಷ ರೂ. ಮಂಜೂರಾಗಿದೆ.

ಸ್ಥಳೀಯ ಜನಪ್ರತಿನಿಧಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮೃಣಾಲ ಹೆಬ್ಬಾಳಕರ್ ಸೇರಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆಯನ್ನು‌‌ ನೀಡಿದರು..

ಗ್ರಾಮದ ಶ್ರೀ ಲಕ್ಷ್ಮೀ ಮಂದಿರದ ಅಭಿವೃದ್ಧಿಗಾಗಿ 5 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಲಾಗಿದ್ದು, ಜೊತೆಗೆ ವೈಯಕ್ತಿಕವಾಗಿ ಒಂದು‌‌ ಲಕ್ಷ ರೂ,ಗಳನ್ನು ದೇವಸ್ಥಾನದ ಕಮೀಟಿಯವರಿಗೆ ಇದೇ ವೇಳೆ ಮೃಣಾಲ ಹೆಬ್ಬಾಳಕರ್ ಹಸ್ತಾಂತರಿಸಿದರು.

ಈ‌‌ ಸಂದರ್ಭದಲ್ಲಿ ಮಲಪ್ರಭಾ ಗಾವಡೆ, ಲಕ್ಷ್ಮೀ ಗಾವಡೆ, ಚಬುತಾಯಿ‌ ಕಾಂಬಳೆ, ಪ್ರಾಚಿ ಗಂಗೂಬಾಯಿ, ಅರುಣ ಗಾವಡೆ, ಮಲ್ಲಪ್ಪ ಗಾವಡೆ, ನಾರಾಯಣ ‌ಚೌಹಾಣ, ಅರುಣ ಬೋಗನ್, ನಾರಾಯಣ ಭಾಂಡ್ಗೆ, ಜಯವಂತ ಸಾವಂತ, ಮಾರುತಿ ಖಾದರವಾಡ್ಕರ್, ಗಜಾನನ ಮೋರೆ ಮುಂತಾದವರು ಉಪಸ್ಥಿತರಿದ್ದರು.

spot_img

Related News

ಕೊಲೆಯಾದ ಪ್ರವೀಣ್ ಪತ್ನಿಗೆ ಸಿಎಂ ಕಚೇರಿಯಲ್ಲಿ ಗುತ್ತಿಗೆ ನೌಕರಿ 

ಬೆಂಗಳೂರು : ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ...

ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ಧಿಡೀರ್ ದಾಳಿ

ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -