spot_img
spot_img
spot_img
29.1 C
Belagavi
Wednesday, October 5, 2022
spot_img

89 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ: ಪೂಜೆ ನೆರವೇರಿಸಿದ ಶಾಸಕಿ ಹೆಬ್ಬಾಳಕರ್

spot_img

ಬೆಳಗಾವಿ :  ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರ ಚಾಲನೆ ನೀಡುತ್ತಿರುವ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಗುರುವಾರ 89 ಲಕ್ಷ ರೂ. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬೆನಕನಹಳ್ಳಿ ಗ್ರಾಮದಲ್ಲಿ 68 ಲಕ್ಷ ರೂ, ಹಾಗೂ ಸೋನೋಲಿ ಗ್ರಾಮದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ಸಿಕ್ಕಿದೆ. ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ನಿಗಮಗಳ ವತಿಯಿಂದ ಈ ಕಾಮಗಾರಿಗಳು ನಡೆಯಲಿವೆ.

68 ಲಕ್ಷ ರೂ. ವೆಚ್ಚ

ಬೆನಕನಹಳ್ಳಿ ಗ್ರಾಮಕ್ಕೆ ಲೋಕೋಪಯೋಗಿ ಇಲಾಖೆಯ ವತಿಯಿಂದ 22 ಲಕ್ಷ ರೂ, ಹಾಗೂ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 46 ಲಕ್ಷ ರೂ, ಬಿಡುಗಡೆಯಾಗಿದೆ. ಒಟ್ಟೂ 68 ಲಕ್ಷ ರೂ. ವೆಚ್ಚದ ಈ ಕಾಮಗಾರಿಗೆ ಲಕ್ಷ್ಮಿ ಹೆಬ್ಬಾಳಕರ್ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಮಲ್ಲೇಶ ಚೌಗುಲೆ, ಸಿದ್ದಪ್ಪ ಕಾಂಬಳೆ, ಮಹೇಶ ಕೋಲಕಾರ, ಬಾಳು ದೇಸೂರಕರ್, ಕಲ್ಲಪ್ಪ ದೇಸೂರಕರ್, ಜ್ಯೋತಿಬಾ ಬಿಸಲೆ, ಮೋಹನ ಸಾಂಬ್ರೆಕರ್, ಆನಂದ ಕೋಲಕಾರ, ಮೀನಾಕ್ಷಿ ಪಾಟೀಲ, ಪದ್ಮರಾಜ ಪಾಟೀಲ, ಪ್ರಭಾಕರ್ ದೇಸೂರಕರ್, ಭೀಮಪ್ಪ ಕೇದರ್ಜಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

21 ಲಕ್ಷ ರೂ. ಬಿಡುಗಡೆ

ಸೋನೋಲಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣಕ್ಕಾಗಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 21 ಲಕ್ಷ ರೂ, ಮಂಜೂರಾಗಿದೆ. ಈ ಕಾಮಗಾರಿಗೆ ಸಹ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪೂಜೆ ನೆರವೇರಿಸಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಗುರುನಾಥ ಪಾಟೀಲ, ಪ್ರಕಾಶ ಪಾಟೀಲ, ಮನು ಬೆಳಗಾಂವ್ಕರ್, ಯಲ್ಲಪ್ಪ ಡೇಕೋಳ್ಕರ್, ಮನೋಹರ ಜಾಂಗ್ರುಚೆ, ಬಾಲಕೃಷ್ಣ ಲೋಹಾರ, ದೇವಪ್ಪ ಕಡೋಲ್ಕರ್, ರಾವಳು ಪಾಟೀಲ, ಗ್ರಾಮ ಸುಧಾರಣೆ ಕಮೀಟಿಯ ಪದಾಧಿಕಾರಿಗಳು, ಮಹಿಳಾ ಕಮೀಟಿಯ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

spot_img

Related News

ವಿಜಯ ದಶಮಿಯಂದೇ ಸೇನಾ ಹೆಲಿಕಾಪ್ಟರ್ ಪತನ : ಪೈಲಟ್‌ ದುರ್ಮರಣ 

ಅರುಣಾಚಲ ಪ್ರದೇಶ : ತವಾಂಗ್ ಪ್ರದೇಶದ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನವಾಗಿ ಒಬ್ಬ ಪೈಲಟ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಒಬ್ಬ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಅವಘಡದಲ್ಲಿ ಸಹ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ...

ಪಾರ್ಶ್ವವಾಯು, ಹೃದಯಾಘಾತ ಕಾಯಿಲೆಯಿಂದ ಹೆಚ್ಚಾಗಿ ಜನ ಸಾಯುತ್ತಾರೆ : ಭವಿಷ್ಯ ನುಡಿದ ಕೋಡಿ ಶ್ರೀ

ಧಾರವಾಡ: ಯುಗಾದಿ ಕೊನೆಯವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ. ಪಾರ್ಶ್ವವಾಯು, ಹೃದಯಾಘಾತದಿಂದ ಹೆಚ್ಚಾಗಿ ಜನ ಸಾಯುತ್ತಾರೆ. ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -