ಬೆಳಗಾವಿ: ಕೇಂದ್ರ ಸರ್ಕಾರ ನಮ್ಮ ಸರ್ವರ್ ಹಾಗೂ ಸಿಸ್ಟಮ್ಗಳನ್ನು ಇವಿಎಂ ಮಾದರಿಯಲ್ಲಿ ಹ್ಯಾಕ್ ಮಾಡಿದೆ. ಇದರಿಂದ ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಇದು ನನ್ನ ಹೇಳಿಕೆ ಕೇವಲ ರಾಜಕೀಯ ಸ್ಟೇಟಮೆಂಟ್ ಅಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಗೆ ಬಿಜೆಪಿಯವರು ಸಾಕಷ್ಟು ತಿರುಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅವರ ಹೇಳಿಕೆಗಳೂ ಬಹಳಷ್ಟಿವೇ. ಬಿಜೆಪಿಯವರು ಕೂಡಾ ಅನೇಕ ಭಾರಿ ವಿವಿಧ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇಂಥಹ ಹೇಳಿಕೆಗಳನ್ನು ನೋಡುತ್ತಾ ಹೋದರೆ ನಾವು ಬಿಜೆಪಿಯವರದು ಲಿಸ್ಟ್ ಕೋಡಬೇಕಾಗುತ್ತದೆ ಎಂದು ಬಿಜೆಪಿ ವಿರುದ್ಧ ಚಾಟಿ ಬೀಸಿದರು.