Ad imageAd image

ನನ್ನ ಅತ್ತೆ ಹೊಡದಿದ್ದಾರೆ… ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದ ಸಚಿವೆ ಹೆಬ್ಬಾಳ್ಕರ್

ratnakar
ನನ್ನ ಅತ್ತೆ ಹೊಡದಿದ್ದಾರೆ… ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದ ಸಚಿವೆ ಹೆಬ್ಬಾಳ್ಕರ್
WhatsApp Group Join Now
Telegram Group Join Now

ತುಮಕೂರು: ಮಹಿಳಾ ಸಾಂತ್ವಾನ ಸಹಾಯವಾಣಿ ಸಕ್ರಿಯವಾಗಿದ್ಯಾ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ರಿಯಾಲಿಟಿ ಚೆಕ್ ಮಾಡಿದರು. ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲೇ ಜಿಲ್ಲಾಧಿಕಾರಿ ಫೋನ್​ನಿಂದ ಕರೆ ಮಾಡಿದ ಸಹಾಯವಾಣಿ ಕಾರ್ಯಕ್ಷಮತೆ ಪರಿಶೀಲಿಸಿದರು. ಕರೆ ಮಾಡುವ ಮೊದಲು ದಿನದ 24 ಗಂಟೆ ಸಹಾಯವಾಣಿ ಕೆಲಸ ಮಾಡುತ್ತದೆಯೇ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ‌ಕಲ್ಯಾಣ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಸಹಾಯವಾಣಿ ವಿಭಾಗದಲ್ಲಿ ನಾಲ್ವರು ಕೆಲಸ ಮಾಡುತ್ತಾರೆ.‌ ಹಗಲು ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಾರೆ. ಸಹಾಯವಾಣಿಯ ದೂರವಾಣಿ 24 ಗಂಟೆ ಸಕ್ರಿಯವಾಗಿರುತ್ತೆ ಎಂದರು. ಬಳಿಕ ರಿಯಾಲಿಟಿ ಚೆಕ್​ ಮಾಡಲು ಸಭೆಯಲ್ಲೇ ಸಹಾಯವಾಣಿಗೆ ಕರೆ ಮಾಡಿದರು.

ಮಹಿಳಾ ಸಾಂತ್ವಾನ ಸಹಾಯವಾಣಿಗೆ ಕರೆ ಮಾಡಿ ಸರ್ ನಾನು ಶಿರಾದಿಂದ ಕಾಲ್ ಮಾಡ್ತಿದ್ದೀನಿ. ನಮ್ಮ ಅತ್ತೆ ಹೊಡೆದಿದ್ದಾರೆ. ಸಹಾಯ ಮಾಡ್ತೀರಾ ಎಂದು ಕೇಳಿದರು. ಆಗ ಅತ್ತ ಸಹಾಯವಾಣಿ ಸಿಬ್ಬಂದಿ, ಬೆಳಗ್ಗೆ ಬಂದಿದ್ದವ್ರಾ ನೀವು ಎಂದು ಲಕ್ಷ್ಮೀ ಹೆಬ್ಬಾಳ್ಕರ್​ಗೆ ಕೇಳಿದ್ದಾರೆ. ಇಲ್ಲ ನಾನು ಈಗಷ್ಟೇ ಕಾಲ್ ಮಾಡಿದ್ದೇನೆ ಎಂದ ಸಚಿವೆ ಉತ್ತರಿಸಿದರು. ಕೊನೆಗೆ ಕರೆ ಸ್ವೀಕರಿಸಿದ ಸಿಬ್ಬಂದಿಗೆ ನಾನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಪರಿಚಯ ಹೇಳಿಕೊಂಡರು. ಅಲ್ಲದೇ ಸಹಾಯವಾಣಿ ಸಕ್ರಿಯವಾಗಿದ್ದಕ್ಕೆ ಅಭಿನಂದನೆ ತಿಳಿಸಿದರು.

 

WhatsApp Group Join Now
Telegram Group Join Now
Share This Article