ಗುಜರಾತ್ ರಾಜ್ಯದ ಮೈಸಾನದಲ್ಲಿ ನಡೆದ 68ನೇಯ ರಾಷ್ಟ್ರೀಯ ಸ್ಕೂಲ ಗೇಮ್ 14ನೇ ವರ್ಷದ ಜೊಡೋ ಪಂದ್ಯಾವಳಿಯಲ್ಲಿ ಮುತ್ಯಾನಟ್ಟಿ ಗ್ರಾಮದ ಗಾಯತ್ರಿ , ರಂಜಿನಾ, ಭೂಮಿಕಾ ಹಾಗೂ ಪುಷ್ಪ ಮೂರನೇ ಸ್ಥಾನಕ್ಕೆ ಪದಕ ಗೆದ್ದು ಸಾಧನೆ ಗೈದಿದ್ದಾರೆ.
27 ಕೆಜಿಯಲ್ಲಿ ಗಾಯತ್ರಿ ಬೆಳಗಾವಿ ತೃತಿಯ ಸ್ಥಾನ,
32 ಕೆಜಿಯಲ್ಲಿ ರಂಜನಾ ನಾಯಕ್ ತೃತೀಯ ಸ್ಥಾನ,
40 ಕೆಜಿ ಭೂಮಿಕಾ ಬೆಳಗಾವಿ ತೃತೀಯ ಸ್ಥಾನ ಹಾಗೂ 23 ಕೆಜಿಯಲ್ಲಿ ಪುಷ್ಪಾ ಬೆಳಗಾವಿ ತೃತೀಯ ಸ್ಥಾನ ಪಡೆದು ಪದಕ ಗೆದ್ದಿದ್ದಾರೆ.
ಅಭಿಮನ್ಯು ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮುತ್ಯಾನಟ್ಟಿಯಲ್ಲಿ ತರಬೇತಿ ಪಡೆಯುತ್ತಿದ್ದ ಬಾಲಕಿಯರು ಗ್ರಾಮ ಮತ್ತು ಜಿಲ್ಲಾ. ರಾಜ್ಯದಲ್ಲಿ ತಮ್ಮ ಸಾಧನೆ ಮೂಲಕ ಕೀರ್ತಿಯನ್ನು ಸಾಧಿಸಿದ್ದಾರೆ. ಇವರ ಸಾಧನೆ ಮುತ್ಯಾನಟ್ಟಿ ಗ್ರಾಮದ ವಿವಿಧ ಸಂಘಟನೆಗಳಿಂದ ಹಾಗೂ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ (ರಾಜು) ಸೆಟ್ ಮಹಾಋಷಿ ವಾಲ್ಮೀಕಿ ಜಯಂತಿ ನಿಮಿತ್ಯವಾಗಿ ಇಂದು ಗ್ರಾಮ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಬಾಲಕಿಯರಿಗೆ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸೀಫ್ (ರಾಜು) ಸೇಟ್ ಕಾಂಗ್ರೆಸ್ ಯುವ ನಾಯಕರಾದ ಅಮನ್ ಸೇಟ್ ಜೊಡೋ ತರಬೇತಿದರಾದ ಎಲ್ಲಪ್ಪ ಗುರವ, ವಿಷ್ಣು ಗುರುವ, ಹಿರಿಯರಾದ ಗೋಳಪ್ಪ ದಡ್ಡಿ ,ಸಿದ್ದಪ್ಪ ಗುರುವ, ಸಿದ್ದರಾಯ್ ಗುರುವ ಮಂಜುನಾಥ್ ಎಲ್ಲಪ್ಪ ನಾಯಕ ಹಾಗೂ ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.