ಬೂತ್ ಮಟ್ಟದ ವರದಿ ಪ್ರಕಾರ 108 ಸ್ಥಾನ ಗೆದ್ದೇ ಗೆಲ್ಲುತ್ತೇವೆ. 35 ಕ್ಷೇತ್ರಗಳಲ್ಲಿ 50:50 ಇದೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.
ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, 120ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ. ನಮ್ಮ ನಾಯಕರು JDS ಜತೆ ಚರ್ಚೆ ಮಾಡಲು ಹೋಗಿಲ್ಲ. ಬಹುಮತ ಬರುವ ವಿಶ್ವಾಸ ಇರುವುದರಿಂದ ಈ ಪ್ರಶ್ನೆ ಬರಲ್ಲ. ಸರ್ಕಾರಕ್ಕೆ ಯಾವುದೇ ರೀತಿಯ ಕೆಟ್ಟ ಹೆಸರು ಬಂದಿಲ್ಲ ಎಂದು ಹೇಳಿದ್ದಾರೆ.