ಬೆಳಗಾವಿ: ಮೂಡಾ ಪ್ರಕರಣದಲ್ಲಿ ಹೈಕೋರ್ಟ್ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿಯನ್ನು ವಜಾ ಗೊಳಿಸಿದ ಹೈಕೋರ್ಟ್ ನಲ್ಲಿ ಇಂದು ಬೆಳಗಾವಿ ಮಹಾನಗರ ಭಾರತೀಯ ಜನತಾ ಪಕ್ಷದ ನಾಯಕರುಗಳು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸಿಎಂ ಸಿದ್ದರಾಮಯ್ಯ ಇಡಬೇಕೆಂದು ಒತ್ತಾಯಿಸಿದರು.
ಸಂಜಯ ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ದೇಶದ ಸಂವಿಧಾನ ಮತ್ತು ಕಾನೂನಿಗೆ ಗೌರವ ಸಲ್ಲಿಸುವ ಕಾರ್ಯವಾಗಲಿದೆ. ಭಾರತದಲ್ಲಿ ಸಂವಿಧಾನ ಮತ್ತು ಕಾನೂನಿಗೆ ಎಲ್ಲರಿಗೂ ಸಮಾನ ಗೌರವವಿದೆ. ಕಾನೂನಿನ ಆಜ್ಞೆ ಪಾಲನೆ ಎಲ್ಲರಿಗೂ ಅನಿವಾರ್ಯ. ಸಿದ್ದರಾಮಯ್ಯ ಕೂಡ ಇದಕ್ಕೆ ಹೊಂದಿಕೆಯಾಗಬೇಕು. ಅವರು ತಕ್ಷಣವೇ ತಮ್ಮ ಸ್ಥಾನ ತ್ಯಜಿಸಬೇಕು ಎಂದು ಕಟುವಾಗಿ ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರು ಅನಿಲ್ ಬೆನಕೆ ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ ತೀರ್ಪಿಗೆ ಗೌರವ ನೀಡಬೇಕು. ಬಿಜೆಪಿ ಮುಖಂಡರಾದ ಮುರುಗೇಂದ್ರ ಗೌಡ ಪಾಟೀಲ್ ಮಾತನಾಡಿ ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿಗಳು ತಿಳಿಯಬೇಕು ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಅವರ ಮೇಲೆ ಆರೋಪ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದರು ಆಗಿನ ಅವರ ಹೇಳಿಕೆಗಳನ್ನು ಪರಿಶೀಲಿಸಬೇಕು. ಮತ್ತು ಆಗ ನುಡಿದಂತೆ ಈಗ ನಡೆದುಕೊಳ್ಳಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಬೆಳಗಾವಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ ಬೆಳಗಾವಿ ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ, ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ,ಬಿಜೆಪಿ ಮಹಾನಗರ ಉಪಾಧ್ಯಕ್ಷ ಬಿರಾದರ್ ಗೌಡ ಪಾಟೀಲ್ ಬಿಜೆಪಿ ಓಬಿಸಿ ಮಹಾನಗರ ಅಧ್ಯಕ್ಷ ಪ್ರಭು ಹೂಗಾರ್ ಹಾಜರಿದ್ದರು.