spot_img
spot_img
spot_img
21.1 C
Belagavi
Friday, September 30, 2022
spot_img

ಉತ್ತರ ಕರ್ನಾಟಕದ ವಿಶೇಷ ಗ್ರಾಮೀಣ ಕ್ರೀಡೆ ಕುಸ್ತಿಗೆ ಅಗತ್ಯ ಪ್ರೋತ್ಸಾಹ :  ಶಾಸಕಿ  ಹೆಬ್ಬಾಳಕರ್ ಭರವಸೆ

spot_img

ಬೆಳಗಾವಿ : ಉತ್ತರ ಕರ್ನಾಟಕದ ವಿಶೇಷ ಕ್ರೀಡೆಯಾಗಿರುವ ಕುಸ್ತಿಗೆ ಪ್ರೋತ್ಸಾಹ ಅಗತ್ಯ. ಈ ದಿಸೆಯಲ್ಲಿ ಸರಕಾರದಿಂದ ಸೂಕ್ತ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ಸಾಂಬ್ರಾ ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ಯವಾಗಿ ಭಾನುವಾರ ರಾತ್ರಿ ನಡೆದ ಭಾರಿ ನಿಖಾಲಿ ಕುಸ್ತಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುಸ್ತಿ ವಿಶಿಷ್ಟ ಕಲೆಯಾಗಿದೆ. ಇಡೀ ದೇಹದ ಬೆಳವಣಿಗೆಗೆ ವ್ಯಾಯಮ ನೀಡುವ ಕ್ರೀಡೆಯಾಗಿದೆ. ಉತ್ತರ ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಅದರಲ್ಲೂ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಇದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಹಲವಾರು ಹೆಸರಾಂತ ಕುಸ್ತಿಪಟುಗಳು ಜಿಲ್ಲೆಯಿಂದ ತಯಾರಾಗಿದ್ದಾರೆ ಎಂದು ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಅಂತರಾಷ್ಟ್ರೀಯ ಕುಸ್ತಿಪಟು ಶಿವಾಜಿ ಚಿಂಗಳೆ, ನಾಗೇಶ ದೇಸಾಯಿ, ಮುಕುಂದ ಮುತಗೇಕರ, ಯಲ್ಲೋಜಿ ಪಾಟೀಲ, ರಮಾಕಾಂತ ಕೊಂಡುಸ್ಕರ್, ರಾಜು ದೇಸಾಯಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ರಂಜನಾ ಅಪ್ಪಯಾಚೆ, ಗ್ರಾಮದ ಜನರು, ಕುಸ್ತಿ ಪಟುಗಳು ಉಪಸ್ಥಿತರಿದ್ದರು.

spot_img

Related News

ಕೊಲೆಯಾದ ಪ್ರವೀಣ್ ಪತ್ನಿಗೆ ಸಿಎಂ ಕಚೇರಿಯಲ್ಲಿ ಗುತ್ತಿಗೆ ನೌಕರಿ 

ಬೆಂಗಳೂರು : ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ...

ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ಧಿಡೀರ್ ದಾಳಿ

ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -