Ad imageAd image

Belagavi: ನಮ್ಮ ಹೋರಾಟ ತಡೆಯಲು ಬೆದರಿಕೆ ಹಾಕುತ್ತಿದ್ದಾರೆ: ಮೃತ್ಯುಂಜಯ ಶ್ರೀ

ratnakar
Belagavi: ನಮ್ಮ ಹೋರಾಟ ತಡೆಯಲು ಬೆದರಿಕೆ ಹಾಕುತ್ತಿದ್ದಾರೆ: ಮೃತ್ಯುಂಜಯ ಶ್ರೀ
WhatsApp Group Join Now
Telegram Group Join Now

ಬೆಳಗಾವಿ: ಪಂಚಮಸಾಲಿ ಮೀಸಲಾತಿಗಾಗಿ ಡಿ.10ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ನಮ್ಮ ಹೋರಾಟ ತಡೆಯಲು ನಮ್ಮ ಮುಖಂಡರಿಗೆ ಕರೆಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿ ಪ್ರಯತ್ನ ಮಾಡಿದ್ರೇ ಮುಖ್ಯಮಂತ್ರಿಗಳೇ ನಿಮ್ಮ ಪಕ್ಷಕ್ಕೇ ಕೆಟ್ಟ ಹೆಸರು ಬರುತ್ತೆ ಎಂದು ಬಸವಜಯ ಮೃತ್ಯುಂಜಯ ಶ್ರೀ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಪೂರ್ವಭಾವಿ ಸಭೆ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 10ರಂದು 10 ಸಾವಿರಕ್ಕೂ ಅಧಿಕ ವಕೀಲರು, ಐದು ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳ ಮೂಲಕ ರ್‍ಯಾಲಿ ಮಾಡುತ್ತೇವೆ. ಸರ್ಕಾರ ಈ ಸಮಾಜದ ಹೋರಾಟಕ್ಕೆ ಸ್ಪಂದನೆ ಮಾಡುತ್ತಿಲ್ಲ. ಲಕ್ಷಾಂತರ ಜನ ಹೋರಾಟಕ್ಕೆ ಬರಲು ತಯಾರಾಗಿದ್ದಾರೆ. 4 ವರ್ಷ ಶಾಂತ ರೀತಿಯಲ್ಲಿ ಹೋರಾಟ ಮಾಡಿದ್ದೇವೆ‌. ನಮ್ಮ ಹೋರಾಟ ತಡೆಯುವ ಕೆಲಸವನ್ನ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾನೂನು ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದರೆ ನಿಮ್ಮ ಸರ್ಕಾರಕ್ಕೆ ಚ್ಯುತಿ ಬರುವ ಸಾಧ್ಯತೆ ಇದೆ. ನಮ್ಮ ಹಕ್ಕನ್ನ ಕೇಳುವ ಪ್ರಯತ್ನ ನಾವು ಮಾಡುತ್ತೇವೆ. ಪ್ರತಿ ಊರಿಂದ ಒಂದು ಟ್ರ್ಯಾಕ್ಟರ್ ಜೊತೆಗೆ ಹತ್ತು ಜನರನ್ನ ಕರೆದುಕೊಂಡು ಬರಬೇಕು. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯ ನಾವು ಹೋರಾಟ ಮಾಡೋದು ಅಷ್ಟೇ ಸತ್ಯ. ನಮ್ಮ ಹೋರಾಟದ ಮುಂಭಾಗದಲ್ಲಿ ವಕೀಲರು, ಅವರ ಹಿಂದೆ ನಾವು, ಹಿಂದೆ ಟ್ರ್ಯಾಕ್ಟರ್ ಇರುತ್ತೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article