spot_img
spot_img
spot_img
18.7 C
Belagavi
Monday, September 26, 2022
spot_img

ಗಣೇಶೋತ್ಸವ ಹಿನ್ನೆಲೆ: ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಹೆಚ್ಚಿಸಿ : ಮೃಣಾಲ ಹೆಬ್ಬಾಳಕರ್

spot_img
spot_img

For Breaking News Download App

ಬೆಳಗಾವಿ : ಗಣೇಶೋತ್ಸವನ್ನು ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುವ ಹಾಗೂ ಗಣೇಶ ದರ್ಶನಕ್ಕಾಗಿ ಬೆಳಗಾವಿಗೆ ಬರುವ ಗ್ರಾಮೀಣ ಭಾಗದ ಜನರಿಗೆ ಬಸ್ ಸೌಲಭ್ಯವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮೃಣಾಲ ಹೆಬ್ಬಾಳಕರ್ ನೇತೃತ್ವದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕಳೆದ ಎರಡು ವರ್ಷ ಕೊರೋನಾ ಸಂಕಷ್ಟದಿಂದಾಗಿ ಯಾವುದೇ ಹಬ್ಬ ಜಾತ್ರೆಗಳನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ದೊಡ್ಡ ಉತ್ಸಾಹದಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಿಂದ ನಗರದತ್ತ ಹಾಗೂ ನಗರದಿಂದ ಗ್ರಾಮೀಣ ಭಾಗಕ್ಕೆ ಹೋಗಿ ಬರಲು ಬಸ್ ಸೌಲಭ್ಯ ಸರಿ ಇಲ್ಲ. ಆದ್ದರಿಂದ ಗಣೇಶ ಚತುರ್ಥಿಯ ಈ ಸಂದರ್ಭದಲ್ಲಿ ಬಸ್ ಗಳ ಸೇವೆಯನ್ನು ಹೆಚ್ಚಿಸಬೇಕು ಎಂದು ಕೆಎಸ್‌ಆರ್ ಟಿಸಿ ಡಿಸಿ ಬಿ.ವೈ ನಾಯಕ ಅವರಿಗೆ ಮನವಿ ಸಲ್ಲಿಸಿದರು.ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಡಿಸಿ ನೀಡಿದರು.

ಮೃಣಾಲ್ ಹೆಬ್ಬಾಳಕರ್ ಇವರ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ ಬೆಳಗಾವಿಯ ಪ್ರಮುಖರಾದ ಮಂಜುನಾಥ್ ತುಕ್ಕಾರ್, ಅಡ್ವೋಕೇಟ್ ಹರ್ಷವರ್ಧನ್ ಪಾಟೀಲ್, ಅಜಿತ್ ಕದಮ್, ಶರತ್ ಪಾಟೀಲ್, ಮಹಾಂತೇಶ್ ಪಾರಿಶ್ವಾಡ, ಸಚಿನ್ ಕಿಲ್ಲೇಕರ್, ಹೊಳಪ ಪೂಜಾರಿ, ಮುರುಸಿದ್ಧ ಬಾಳೆಕುಂದ್ರಿ, ಪ್ರೇಮ ಕೊಲಕಾರ್, ಸಂಗಪ್ಪ ಕುಡಚಿ, ಪವನ್ ರಾಮಣ್ಣವರ, ಪ್ರವೀಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -