Ad imageAd image

ಪಿಎಂಎವಾಯ್ (ಜೆ) ಅಡಿ ಜಿಲ್ಲೆಗೆ ಹದಿನೈದು ಸಾವಿರ ಮನೆಗಳು ಮಂಜೂರು-ಸಂಸದ ಸಾಗರ ಈಶ್ವರ ಖಂಡ್ರೆ

ratnakar
ಪಿಎಂಎವಾಯ್ (ಜೆ) ಅಡಿ ಜಿಲ್ಲೆಗೆ ಹದಿನೈದು ಸಾವಿರ ಮನೆಗಳು ಮಂಜೂರು-ಸಂಸದ ಸಾಗರ ಈಶ್ವರ ಖಂಡ್ರೆ
WhatsApp Group Join Now
Telegram Group Join Now

ಬೀದರ:- ಜಿಲ್ಲೆಯನ್ನು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಭಾಗೀತ್ವದಲ್ಲಿ 15 ಸಾವಿರ ಮನೆಗಳು ಮಂಜೂರಾಗಿದ್ದು, ಯಾರಿಗೆ ಮನೆ ಮತ್ತು ನಿವೇಶನವಿಲ್ಲ ಅಂತಹವರಿಗೆ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಬೀದರ ಸಂಸದರಾದ ಸಾಗರ ಈಶ್ವರ ಖಂಡ್ರೆ ತಿಳಿಸಿದರು.


ಇಂದು ಸೋಮವಾರ ಭಾಲ್ಕಿಯ ಸಂಸದರ ಕಚೇರಿ ಆವರಣದಲ್ಲಿ ಭಾಲ್ಕಿ ತಾಲ್ಲೂಕಿನ ಗ್ರಾಮೀಣ ಭಾಗದ 665 ಜನರಿಗೆ 2024-25ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಪಿ.ಎಂ.ಎ.ವಾಯ್ (ಜಿ) ಅಡಿಯಲ್ಲಿ ಮಂಜೂರಿಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ತಿಳುವಳಿಕೆ ಪತ್ರ ವಿತರಣೆ ಮಾಡಿ ಮಾತನಾಡಿದರು.


ಸಾಮಾನ್ಯ ಜನರಿಗೆ ಮೊದಲನೆ ಕಂತಿನಲ್ಲಿ 30 ಸಾವಿರ ರೂ, ಎರಡನೇ ಕಂತಿನದಲ್ಲಿ 60 ಸಾವಿರ ರೂ, ಮೂರನೇ ಕಂತಿನಲ್ಲಿ 30 ಸಾವಿರ ರೂ. ಒಟ್ಟು 1,20,000 ರೂ. ಹಣ ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೊದಲನೇ ಕಂತಿನಲ್ಲಿ 43,750 ರೂ., ಎರಡನೇ ಕಂತಿನಲ್ಲಿ 87,500 ರೂ., ಮೂರನೇ ಕಂತಿನಲ್ಲಿ 43,750 ರೂ. ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಮಧ್ಯವರ್ತಿಗಳ ನಂಬಬೇಡಿ, ಅನುದಾನವು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದೆ. ಮೊದಲ ಕಂತು ಜಮೆಯಾದ ತಕ್ಷಣವೇ ಮನೆ ಕಾಮಗಾರಿ ಆರಂಭಿಸತಕ್ಕದ್ದು ಎಂದರು.


ಭಾಲ್ಕಿ ತಾಲ್ಲೂಕಿನ ಗ್ರಾಮಾಂತರ ವ್ಯಾಪ್ತಿಗೆ ಒಟ್ಟು 3 ಸಾವಿರ ಮನೆ ಮಂಜೂರಾಗಿದ್ದು, ಈ ಪೈಕಿ ಮೊದಲ ಹಂತದ 665 ಫಲಾನುಭವಿಗಳಿಗೆ ಇಂದು ತಿಳುವಳಿಕೆ ಪತ್ರ ನೀಡಲಾಗುತ್ತಿದೆ ಎಂದರು. ಅದೇ ರೀತಿ ಗ್ರಾಮೀಣ ಭಾಗದಲ್ಲಿ ಇನ್ನೂ ವಸತಿ ರಹಿತರ ಗುರುತಿಸುವಿಕೆ ಕಾರ್ಯ ನಡೆಯುತ್ತಿದ್ದು, ಅಂತವರಿಗೆ ಮುಂದಿನ ಸಮಯದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯವರು ಫಲಾನುಭವಿಗಳಿಗೆ ತಿಳುವಳಿಕೆ ಪ್ರಮಾಣ ಪತ್ರ ವಿತರಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article