ಬಾಗಲಕೋಟೆ : ಜಿಲ್ಲೆಯ ಬೀಳಗಿ ತಾಲೂಕಿನ ನಕ್ಕರಗುಂದಿ ಗ್ರಾಮದಲ್ಲಿ ನನ್ನ 40 ರೂಪಾಯಿ ತೆಗೆದುಕೊಂಡಿದ್ದೀಯಾ ಎಂದು ಅತ್ತೆ ಭೀಮವ್ವ ಗುಳ್ಳಣ್ಣವರು ಸೊಸೆ ರಂಗವ್ವ ಗುಳ್ಳಣ್ಣವರ ಮೇಲೆ ಆರೋಪ ಮಾಡಿದ್ದಾಳೆ.
ಈ ವಿಚಾರವಾಗಿ ಅತ್ತೆ, ಸೊಸೆಯ ಜಗಳ ತಾರಕಕ್ಕೇರಿದೆ. ಪತ್ನಿ ಹಾಗೂ ತಾಯಿ ಜಗಳದಿಂದ ಕೋಪಗೊಂಡ ಮಗ ಮಳಿಯಪ್ಪ ಜಗಳ ಬಿಡಿಸುವ ವೇಳೆ ಪತ್ನಿ ಕಪಾಳಕ್ಕೆ ಪತಿ ಹೊಡೆದಿದ್ದಾನೆ. ಅಸ್ತಮಾ, ಬಿ.ಪಿಯಿಂದ ಬಳಲುತ್ತಿದ್ದ ಪತ್ನಿ, ಒಂದೇ ಹೊಡೆತಕ್ಕೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಇನ್ನು 12 ವರ್ಷದ ಹಿಂದೆ ತನ್ನ ಸೋದರ ಮಾವನ ಮಗಳನ್ನೇ ಮದುವೆಯಾಗಿದ್ದ ಮಳಿಯಪ್ಪ ಹಮಾಲಿ ಕೆಲಸ ಮಾಡುತ್ತಿದ್ದ, ಕೇವಲ 40 ರೂಪಾಯಿ ಜಗಳ ಒಂದು ಜೀವವನ್ನೇ ಬಲಿ ತೆಗೆದುಕೊಂಡಿದ್ದು, ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.