ಬೆಳಗಾವಿ: ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ದಸರಾ ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದ್ದು, ಅದರ ಅಂಗವಾಗಿ ಇಂದು ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಗಳು ನಡೆಯಿತು.
ನಿಗದಿಯಂತೆ ಸ್ಪರ್ಧೆಗಳನ್ನು ಸರದಾರ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಮಳೆಯ ಕಾರಣ ಮಹಿಳಾ ವಿದ್ಯಾಲಯದ ಆಂಗ್ಲ ಮಾಧ್ಯಮ, ಮರಾಠಿ ಮಾಧ್ಯಮ ಶಾಲೆ, ಜಿಎ ಕಾಲೇಜು ಹಾಗೂ ಸರ್ದಾರ ಮೈದಾನದಲ್ಲಿರುವ ಆಡಿಟೋರಿಯಂ ನಲ್ಲಿ ಸ್ಪರ್ಧೆಗಳು ನಡೆದವು.
ಯುಕೆಜಿ, 1, ಹಾಗೂ 2ನೇ ತರಗತಿ ವಿದ್ಯಾರ್ಥಿಗಳಿಗೆ (ನ್ಯಾಷನಲ್ ಪ್ಯಾಗ್ ಹಾಗೂ ನಿಸರ್ಗ) 3 ರಿಂ 7 ನೇ ತರಗತಿ ವಿದ್ಯಾರ್ಥಿಗಳಿಗೆ( ಸ್ವಚ್ಛ ಭಾರತ ಅಭಿಯಾನ ಹಾಗೂ ಇಸ್ರೊ ಸ್ಪೇಸ್ ಸೆಟ್ ಲೈಟ್)
7 ರಿಂದ 10 ತರಗತಿ ವಿದ್ಯಾರ್ಥಿಗಳಿಗೆ (ಹರ್ ಘರ್ ತಿರಂಗಾ ಗಣೇಶನ ಭಾ ಚಿತ್ರ),
ಕಾಲೇಜು ವಿಧ್ಯಾರ್ಥಿಗಳಿಗೆ (ಭಾರತೀಯ ಸೇನೆಯ ವಿಜೋತ್ಸವ ಹಾಗೂ ತರಕಾರಿ ಮಾರುಕಟ್ಟೆ) ಸ್ಪರ್ಧೆಗಳು ನಡೆದವು.
ಚಿತ್ರ ಕಲಾ ಸ್ಪರ್ಧೆಗಳನ್ನು ವೀಕ್ಷಣೆ ಮಾಡಿದ ಬಳಿಕ ಮಾಹಿತಿ ನೀಡಿದ ಶಾಸಕ ಅನಿಲ ಬೆನಕೆ ಅವರು, ನಿರೀಕ್ಷೆಗಿಂತ ಅತಿ ಉತ್ಸಾಹದಿಂದ ವಿದ್ಯಾರ್ಥಿಗಳು ಭಾಗ ವಹಿಸುತ್ತಿದ್ದಾರೆ. ಸ್ಪರ್ಧೆಗಳನ್ನು ನೇರವೇರಲು ಸಹಕರಿದ ಶಿಕ್ಷಣ ಇಲಾಖೆಗೆ ಧನ್ಯವಾದ ಸಲ್ಲಿಸಿದರು. ಈ ವೇಳೆ ರಾಷ್ಟ್ರ ಧ್ವಜದ ಚಿತ್ರ ಬಿಡಿಸಿ ಶಾಸಕ ಅನಿಲ ಬೆನಕೆ ಅವರು ಎಲ್ಲರ ಗಮನ ಸೆಳೆದರು.