Ad imageAd image

ನಿಪ್ಪಾಣಿ: ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ

ratnakar
ನಿಪ್ಪಾಣಿ: ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ
WhatsApp Group Join Now
Telegram Group Join Now

ಚಿಕ್ಕೋಡಿ: ಕಲುಷಿತ ನೀರು  ಕುಡಿದು 30ಕ್ಕೂ ಹೆಚ್ಚು ಜನರು ವಾಂತಿ, ಭೇದಿಯಿಂದ ಬಳಲಿರುವ ಘಟನೆ ನಿಪ್ಪಾಣಿ  ತಾಲೂಕಿನ ಕಸನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬೋರ್​ವೆಲ್ ಮೂಲಕ ನಲ್ಲಿಗೆ ನೀರು ಸರಬರಾಜು ಮಾಡಲಾಗುತ್ತದೆ. ನೀರು ಸರಬರಾಜು ಮಾಡುವ ಪೈಪ್​ ಒಡೆದು ಕೊಳಚೆ ನೀರು ಮಿಶ್ರಣವಾಗಿದೆ.

ಈ ನೀರು ಕುಡಿದು 30ಕ್ಕೂ ಹೆಚ್ಚು ಜನರು ವಾಂತಿ, ಭೇದಿಯಿಂದ ಬಳಲಿದ್ದಾರೆ. ಇವರಲ್ಲಿ 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲೇ ಚಿಕಿತ್ಸೆ ನೀಡಿದ್ದಾರೆ. ವೈದ್ಯಾಧಿಕಾರಿಗಳ ತಂಡ ಕಸನಾಳ ಗ್ರಾಮದಲ್ಲಿ ಬೀಡುಬಿಟ್ಟಿದೆ.

ಎರಡು ತಿಂಗಳ ಹಿಂದೆ ಬೀದರ ತಾಲೂಕಿನ ಚಟನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರೀದಾಬಾದ ಗ್ರಾಮದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ವಿಚಾರವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳಿಗೆ ತಿಳಿಸದೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿ ಕುಡಿಯುವ ನೀರಿನ ಪೈಪ್​ಲೈನ್​ ಹಾದು ಹೋದ ದಾರಿಯಲ್ಲೇ ನಡೆದಿತ್ತು.

ಇದರಿಂದ ಕುಡಿಯುವ ನೀರಿನ ಪೈಪ್​​ಲೈನ್​ಗೆ ಹಾನಿಯಾಗಿ ಜು. 25 ರಂದು ಚರಂಡಿಯ ಕಲುಷಿತ ನೀರು ಪೈಪ್‌ಲೈನ್ ನೀರಿಗೆ ಸೇರಿತ್ತು. ಇದೇ ನೀರನ್ನು ಕುಡಿದು 21 ಜನರು ಅಸ್ವಸ್ಥಗೊಂಡಿದ್ದರು. ಇವರನ್ನು ಕೂಡಲೇ ಜಿಲ್ಲಾ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿರುವ‌ ಬಸವತೀರ್ಥ ವಿದ್ಯಾಪೀಠದ ವಸತಿ ಶಾಲೆಯ 50ಕ್ಕೂ ಹೆಚ್ಚು ಚಿತ್ರಾನ್ನ ತಿಂದು ಮಕ್ಕಳು ವಾಂತಿ-ಭೇದಿಯಿಂದ ಬಳಲಿದ್ದರು. ಕೂಡಲೆ ಮಕ್ಕಳನ್ನು ಹುಮ್ನಾಬಾದ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ ಮಕ್ಕಳು ಉಪಹಾರಕ್ಕೆ ಚಿತ್ರಾನ್ನ ಸೇವಿಸಿದ್ದರು. ಬಳಿಕ, ವಿದ್ಯಾರ್ಥಿಗಳು ವಾಂತಿ-ಭೇದಿಯಿಂದ ನರಳಾಡಿದ್ದರು

WhatsApp Group Join Now
Telegram Group Join Now
Share This Article