ಬೆಳಗಾವಿ : ಖತರ್ನಾಕ ಕಳ್ಳನೋರ್ವ ಕ್ಷಣ ಮಾತ್ರದಲ್ಲಿ ಹಣ ದೋಚಿಕೊಂಡು ಪರಾರಿ ಆದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹೊರವಲಯದಲ್ಲಿರುವ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಬೇಕರಿ ಪಕ್ಕ ನಿಲ್ಲಿಸಿದ್ದ ಬೈಕನಿಂದ 3.40 ಲಕ್ಷ ಹಣವನ್ನು ಎಗರಿಸಿ ಎಸ್ಕೇಪ್ ಆಗಿದ್ದಾನೆ. ತಾಲೂಕಿನ ಗೊಣಗನೂರ ಗ್ರಾಮದ ಹಟೇಲಸಾಬ ಬುಡ್ಡೆಸಾಬ ಕರೋಲೆ ಎಂಬಾತನೇ ಹಣ ಕಳೆದುಕೊಂಡ ನತದೃಷ್ಟ ವ್ಯಕ್ತಿ
ರಾಮದುರ್ಗದ ಕೆನರಾ ಬ್ಯಾಂಕಿನಿಂದ 3.40 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ತನ್ನ ಬೈಕಿನಲ್ಲಿನಲ್ಲಿದ್ದ ಸೈಡ್ ಬಾಕ್ಸ್‌ನಲ್ಲಿ ಇಟ್ಟು ಯಾದವಾಡ ಪೆಟ್ರೋಲ್ ಬಂಕ್ ಮುಂದಿನ ಬೇಕರಿಯೊಂದರಲ್ಲಿ ಸಿಹಿ ತಿನಿಸು ತೆಗೆದುಕೊಳ್ಳಲು ಬೈಕ್ ನಿಲ್ಲಿಸಿ ಹೋಗುತ್ತಿದ್ದಂತೆ ಬೈಕ್ ಹಿಂಬಾಲಿಸಿದ ಖದೀಮನು ನಕಲಿ ಕೀ ಬಳಸಿ ಬಾಕ್ಸ್ ನಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಕೃತ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಸುದ್ದಿ ತಿಳಿದ ರಾಮದುರ್ಗ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಚೋರ ಪತ್ತೆಗಾಗಿ ಜಾಲ ಬೀಸಿದ್ದಾರೆ. ಈ ಕುರಿತು ರಾಮದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.