ಬೆಳಗಾವಿಗೆ ಆಗಮಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಹಾಜ್ ಮತ್ತು ಪೌರಾಡಳಿತ ಮಂತ್ರಿಗಳಾದ ರಹೀಮ್ ಖಾನ್ ಬೆಳಗಾವಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆ ಹತ್ತಿರ ಇರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಕ್ಯಾಂಟೀನ್ ನಿರ್ವಹಣೆಯ ಪರಿಶೀಲನೆ ಮಾಡಿದರು.
ಮಧ್ಯಾಹ್ನದ ಅಲ್ಲಿಯೆ ಭೋಜನ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ
ಬಿಜೆಪಿ ಸರ್ಕಾರ ಬಡವರ ಭಾಗ್ಯವಾಗಿರುವ ಇಂದಿರಾ ಕ್ಯಾಂಟೀನ್ ನಿರ್ಲಕ್ಷ್ಯ ಮಾಡಿತ್ತು. ಇಂದಿರಾ ಕ್ಯಾಂಟೀನ್ ಎಲ್ಲಾ ವರ್ಗದ ಬಡ ಜನರಿಗೆ ಹಸಿವು ನೀಗಿಸುವ ಕ್ಯಾಂಟಿನ್ ಆಗಿದೆ. ಮಾಜಿ ಪ್ರಧಾನಿ ಹಾಗೂ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಎಂಬ ಹೆಸರೇ ಬಿಜೆಪಿಗೆ ಅಲರ್ಜಿ ವಾಗಿರಬಹುದೆಂದು ಪರೋಕ್ಷವಾಗಿ ಬಿಜೆಪಿ ಆಡಳಿತಕ್ಕೆ ಮಾತಿನಿಂದ ಚುಚ್ಚಿದರು.
ಇಂದಿರಾ ಕ್ಯಾಂಟೀನಿಗೆ ಯಾವುದೇ ರೀತಿಯ ಆರ್ಥಿಕ ಕೂರತೆ ಇಲ್ಲ 3,25,000 ಕೋಟಿ ಬಜೆಟ್ ನೀಡುವ ಕರ್ನಾಟಕ ಸರ್ಕಾರ 100 ,200 ರೂ.ಕೋಟಿಗೆ ಜನರಿಗೆ ಅನ್ನ ನೀಡುವುದಕ್ಕೆ ಹಿಂದೆ ಸರಿಯುವುದಿಲ್ಲ . ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನಗೊಂಡಿರುವಂತೆ 240 ಕೋಟಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಮೀಸಲಿಡಲು ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ನಗರ ಮತ್ತು ಪಟ್ಟಣ ಪುರಸಭೆಗಳ ವ್ಯಾಪ್ತಿಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಹಳೆ ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಳಾಂತರ ಮಾಡಲು ಆಗುವುದಿಲ್ಲ, ಅದರ ಸ್ಥಳಾಂತರ ವೆಚ್ಚ ಮತ್ತು ಹೊಸದಾಗಿ ಕ್ಯಾಂಟೀನ್ ಗಳನ್ನು ಸ್ಥಾಪಿಸುವ ವೆಚ್ಚ ಒಂದೇ ಆಗಿರುವುದರಿಂದಾಗಿ ಸ್ಥಳಾಂತರ ಮಾಡದೆ ಅವಶ್ಯಕತೆ ಇದ್ದಲ್ಲಿ ಹೊಸ ಕ್ಯಾಂಟೀನ್ ಗಳನ್ನು ತೆರೆಯಲಾಗುವುದು ಎಂದರು.
ಇಂದಿರಾ ಕ್ಯಾಂಟೀನ್ ವಾರಕ್ಕೆ ಒಮ್ಮೆಯಾದರೂ ಮಾಂಸ ಆಹಾರ ನೀಡಲಿದ್ದಿರಿ ಎಂಬ ಪ್ರಶ್ನೆಗೆ ಅಂತ ಪ್ರಸ್ತಾವನೆ ನಮ್ಮ ಎದುರು ಇಲ್ಲ ,ಆದರೆ ಎಗ್ ರೈಸ್ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಈಗ ರೊಟ್ಟಿ ಚಪಾತಿ ರಾಗಿ ಮುದ್ದೆ ಅಂತಹ ಪೌಷ್ಠಿಕ ಆಹಾರವನ್ನು ನೀಡಲಾಗುವುದು. ಊಟದ ದರ ಐದು ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ ಇದು ಸರ್ಕಾರವೇ ಗುತ್ತಿಗೆದಾರರಿಗೆ ನೀಡಲಿದೆ. ಯಾವುದೇ ರೀತಿಯ ಜನರ ಮೇಲೆ ಈ ದರವನ್ನು ಹೇರುವುದಿಲ್ಲ, ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ರಾಜು ಶೇಟ್ ಸೌದತ್ತಿ ಶಾಸಕರಾದ ವಿಶ್ವಾಸ್ ವೈದ್ಯ ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ,ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ್ ಗುಡಗುಂಡಿ ಹಾಗೂ ಚಿಕ್ಕೋಡಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ ಕಾಂಗ್ರೆಸಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ರತ್ನಾಕರ ಗೌಂಡಿ, ಬೆಳಗಾವಿ