ಕಲಬುರಗಿ: ಡಿ.ಕೆ ಶಿವಕುಮಾರ್ ಅವರಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದ್ದಂತೆ ಕಾಣುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಗೆ ಮಂಗಳೂರ್ ಕುಕ್ಕರ್ ಮೇಲೂ, ಬೆಳಗಾವಿ ಕುಕ್ಕರ್ ಮೇಲೂ ಪ್ರೀತಿ ಇದೆ. ಡಿಕೆಶಿ ಎಲ್ಲರೂ ನಮ್ಮ ಬ್ರದರ್ಸ್ ಅನ್ನುತ್ತಾರೆ. ಅಂದರೆ ಶಾರೀಕ್ ಕೂಡ ಇವರ ಬ್ರದರ್ ಇರಬಹುದು.
ಕಾಂಗ್ರೆಸ್ ಪಕ್ಷಕ್ಕೆ ಒಂದು ಸಮುದಾಯ ಮಾತ್ರ ಮತ ಹಾಕುವ ಹಾಗೆ ಕಾಣುತ್ತದೆ. ಹೀಗಾಗಿ ಅವರ ಓಲೈಕೆಯಲ್ಲಿಯೇ ಇರುತ್ತಾರೆ ಎಂದು ವಾಗ್ದಾಳಿ ನಡೆಸಿದರು.