spot_img
spot_img
spot_img
21.1 C
Belagavi
Friday, September 30, 2022
spot_img

ಮರ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷಗಳ ಪರಿಹಾರದ ಚೆಕ್ ವಿತರಿಸಿದ ಶಾಸಕ ಬೆನಕೆ

spot_img

ಬೆಳಗಾವಿ : ಬೆಳಗಾವಿ ನಗರದಲ್ಲಿ ದಿನಾಂಕ 19 ಏಪ್ರಿಲ್ ನಂದು ಸುರಿದ ಬಾರಿ ಮಳೆ ಗಾಳಿಯಿಂದ ಮರ ಬಿದ್ದು ಮೃತರಾದ ಕಾಳಿ ಅಮರಾಯಿಯ ಹಿರಿಯರಾದ ಶ್ರೀ. ವಿಜಯ ಕೋಲ್ಹಾಪೂರೆ ಇವರ ಕುಟುಂಭಕ್ಕೆ ಇಂದು ಸರ್ಕಾರದ ಎಸ್.ಡಿ.ಆರ್.ಎಫ್. ಎನ್.ಡಿ.ಆರ್.ಎಫ್ ಯೋಜನೆಯಡಿ ರೂ. 5.00 ಲಕ್ಷಗಳ ಚೆಕ್‍ನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಹಸ್ತಾಂತರಿಸಿದರು.

ಚೆಕ್ ಹಸ್ತಾಂತರಿಸಿ ಮಾತನಾಡಿದ ಅವರು ಕಳೆದ ತಿಂಗಳಿನಲ್ಲಿ ಅತಿಯಾದ ಗಾಳಿ ಮಳೆಯಿಂದ ಮರ ಬಿದ್ದು ಹಲವಾರು ಬೈಕ್‍ಗಳು ಹಾನಿಗಾಗಿದ್ದು ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಗಳು ಹಾನಿಯಾಗಿರುತ್ತದೆ. ಇದೇ ಸಂದರ್ಭದಲ್ಲಿ ಬೆಳಗಾವಿ ನಗರದ ಕಾಳಿ ಅಮರಾಯಿಯ ಹಿರಿಯ ಮುಖಂಡರಾದ ವಿಜಯ ಕೋಲ್ಹಾಪೂರೆರವರ ಮೇಲೆ ಮರ ಬಿದ್ದು ಮೃತರಾಗಿದ್ದು, ಇವರಿಗೆ ಸರ್ಕಾರದಿಂದ ರೂ. 5.00 ಲಕ್ಷಗಳ ಪರಿಹಾರ ಚೆಕನ್ನು ಅವರ ಪತ್ನಿಯಾದ ರೇಣುಕಾ ವಿಜಯ ಕೋಲ್ಹಾಪೂರೆ ಇವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ ಅವರು ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿಯ ತಹಶೀಲ್ದಾರ ಆರ್. ಕೆ. ಕುಲಕರ್ಣಿ , ಕಂದಾಯ ನಿರೀಕ್ಷಕ ಜಗದೀಶ ಫಕಾಲಿ, ಮೃತರ ಕುಟುಂಬಸ್ಥರು, ಕಾರ್ಯಕರ್ತರು ಹಾಗೂ ರಹವಾಸಿಗಳಾದ ರಾಹುಲ ಖುಡೆ, ಗಜಾನಂದ ಮಿಸಾಳೆ, ವಿಕ್ರಮ ಕಿಲ್ಲೇಕರ, ವಿಕಾಸ ಮಾನೆ, ರಾಮಾ ಘಾಟಗೆ, ಸುರೇಶ ಅವಳೆ, ಲತಾ ಕೋಟರಾಜ ಹಾಗೂ ಇತರರು ಉಪಸ್ಥಿತರಿದ್ದರು.

 

spot_img

Related News

ಇಂದು ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ

ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಬರಮಾಡಿಕೊಳ್ಳಲು ಕಾಂಗ್ರೆಸ್ ತಯಾರಿ ಜೋರಾಗಿದೆ. ನಾಯಕರನ್ನು ಸ್ವಾಗತಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಸರ್ವ ರೀತಿಯಲ್ಲೂ...

ಪ್ರತಿ ಇನ್ಸಸ್ಟಾಗ್ರಾಂ ಪೋಸ್ಟ್ ಗೆ 8 ಕೋಟಿ ರೂ. ಪಡೆಯುವ ವಿರಾಟ್ ಕೊಹ್ಲಿ

ನವದೆಹಲಿ: ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅವರು ಪ್ರತಿ ಪ್ರಾಯೋಜಿತ ಪೋಸ್ಟ್​ಗೆ ಬರೋಬ್ಬರಿ 8 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಿದ್ದಾರೆ. ಈ ಮೂಲಕ ಇನ್​ಸ್ಟಾಗ್ರಾಂನಲ್ಲಿ ಗರಿಷ್ಠ ಹಣ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -