spot_img
spot_img
spot_img
18 C
Belagavi
Thursday, September 29, 2022
spot_img

250 ಲಕ್ಷಗಳ ಅನುದಾನದಡಿಯಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ಬೆನಕೆ ಭೂಮಿ ಪೂಜೆ 

spot_img

ಬೆಳಗಾವಿ :  ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಅಭಿವೃಧ್ದಿಯ ಹೊಳೆಯನ್ನು ಹರಿಸುತ್ತಿರುವ ಶಾಸಕ ಅನಿಲ ಬೆನಕೆರವರು ಇಂದು ಮತಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ರೂ. 250 ಲಕ್ಷಗಳ ವೆಚ್ಚದಲ್ಲಿ ರಸ್ತೆ ಮರು ಡಂಬರೀಕರಣ, ಸಿ.ಸಿ ರಸ್ತೆಗಳ ನಿರ್ಮಾಣ, ಒಳಚರಂಡಿ ನಿರ್ಮಾಣ ಹಾಗೂ ಸಿಡಿ ನಿರ್ಮಾಣ ಕಾಮಗಾರಿಗಳಿಗೆ ಅವರ ಅಮೃತ ಹಸ್ತದಿಂದ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು.

ನಂತರದಲ್ಲಿ ಮಾತನಾಡಿದ ಅವರು ಬೆಳಗಾವಿ ನಗರದಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳು ಚಾಲನೆಯಲ್ಲಿದ್ದು, ಪೂರ್ಣಗೊಳ್ಳುವ ಹಂತದಲ್ಲಿವೆ ಅದರಂತೆಯೇ ಮತಕ್ಷೇತ್ರದ ಜನರ ಆಶಿರ್ವಾದದಿಂದ ಹಾಗೂ ಅವರ ಪ್ರೀತಿ ವಿಶ್ವಾಸದಿಂದ ಇಂದು ಒಟ್ಟಾರೆಯಾಗಿ ರೂ. 250 ಲಕ್ಷಗಳ ಅನುದಾನದಲ್ಲಿ ಅಭಿವೃಧ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬಸವ ಕಾಲೋನಿಯ ಬಸವ ಮಂದಿರದಿಂದ ಬಾಕ್ಸೈಟ್ ರಸ್ತೆ ವರೆಗೆ ರಸ್ತೆ ಮರು ಡಾಂಬರೀಕರಣ, ಟಿ.ವಿ. ಸೆಂಟರ್‍ನಲ್ಲಿ ಒಳ ಚರಂಡಿ ನಿರ್ಮಾಣ, ವಿನಾಯಕ ನಗರ ಮುಖ್ಯ ರಸ್ತೆಯಿಂದ ವಿನಾಯಕ ನಗರ ಸರ್ಕಲ್ ವರೆಗೆ ರಸ್ತೆ ಮರು ಡಾಂಬರೀಕರಣ, ನೆಹರು ನಗರದ ಬಸವಣ್ಣ ಮಂದಿರದಿಂದ ಬಾಕ್ಸೈಟ್ ರಸ್ತೆವರೆಗೆ ರಸ್ತೆ ಮರು ಡಾಂಬರೀಕರಣ, ಸದಾಶಿವ ನಗರದ 3 ಮತ್ತು 4ನೇ ಕ್ರಾಸ್ ಹಾಗೂ ಚಂದ್ರಕೀರ್ತಿ ಮನೆಯಿಂದ ಉಪ್ಪಿನ ಬಿಲ್ಡಿಂಗ್ ವರೆಗೆ ರಸ್ತೆ ಮರು ಡಾಂಬರೀಕರಣ, ಜಾಧವ ನಗರದಲ್ಲಿ ಸಿಡಿ ನಿರ್ಮಾಣ, ವಿಶ್ವೇಶ್ವರಯ್ಯ ನಗರದಲ್ಲಿ ರಸ್ತೆ ಮರು ಡಾಂಬರೀಕರಣ, ಕಾಳಿ ಅಮರಾಯಿಯ ಅಫೋಲೋ ಫಾರ್ಮಸಿಯಿಂದ ಮೇಘದೂತ ಅಪಾರ್ಟಮೆಂಟ್ ವರೆಗೆ ಸಿ.ಸಿ ರಸ್ತೆ ನಿರ್ಮಾಣ, ರಿಸಾಲ್ದಾರ ಗಲ್ಲಿಯಿಂದ ಗಣಪತಿ ಗಲ್ಲಿವರೆಗೆ ರಸ್ತೆ ಮರು ಡಾಂಬರೀಕರಣ, ಭೋವಿ ಗಲ್ಲಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಚವ್ವಾಟ ಗಲ್ಲಿಯ ನಾನಾಪಾಟೀಲ ಚೌಕನಿಂದ ಕೋರ್ಟ ಕಂಪೌಂಡ್ ವರೆಗೆ ರಸ್ತೆ ಮರುಡಾಂಬರೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಪೂಜೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಅಲ್ಲಿನ ಕಾರ್ಯಕರ್ತರು ರಹವಾಸಿಗಳು ಉಪಸ್ಥಿತರಿದ್ದರು.

 

spot_img

Related News

ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು: ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ಡಿ ಕೆ ಶಿವಕುಮಾರ್...

ಮೂರು ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ ಚವ್ಹಾಣ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -