ಬೆಳಗಾವಿ, : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಹಲವಾರು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಮತ್ತೆ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಂದು ಶಾಸಕ ಅನಿಲ ಬೆನಕೆ ಅವರು, ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಬರ್ನಿಂಗ್ ಸ್ಟಾಂಡ್, ಪೆವರ್ಸ ಅಳವಡಿಕೆ ಹಾಗೂ ಆಸನ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಸದಾಶಿವ ನಗರದ ಲಿಂಗಾಯತ ರುದ್ರ ಭೂಮಿಯಲ್ಲಿ ಪೆವರ್ಸ ಅಳವಡಿಕೆ, ಶೌಚಾಲಯ, ಶೆಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ನ್ಯೂ ಗಾಂಧಿ ನಗರ, ಅಮನ ನಗರ, ಮಾರುತಿ ನಗರ ಹಾಗೂ ಬಸವನ ಕುಡಚಿಯಲ್ಲಿ ಜನರ ಸಮಸ್ಯೆ ಅಲಿಸಿದ ಶಾಸಕ ಅನಿಲ ಬೆನಕೆ ಅವರು, ರಸ್ತೆ, ಚರಂಡಿ, ಡ್ರೇನೆಜ್ ಹಾಗೂ ನಾಲಾ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಇಂದು ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಒಟ್ಟು 3 ಕೋಟಿಗೂ ಹೆಚ್ಚು ವೆಚ್ಚದ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಚಾಲನೆ ನೀಡಲಾಗಿದೆ. ಈ ಪ್ರದೇಶದಲ್ಲಿ ಹಲವಾರು ಸಮಸ್ಯೆ ಇದ್ದು, ಮುಂದಿನ ದಿನಗಳಲ್ಲಿ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನ್ಯೂ ಗಾಂಧೀ ನಗರದಲ್ಲಿ ಜೈ ಕರ್ನಾಟಕ ಜನಪರ ವಿಧಿಕೆಯ ಜಿಲ್ಲಾಧ್ಯಕ್ಷರು ಇರ್ಫಾನ ಅತ್ತಾರ, ಸಮಾಜಸೇವಕರು ಸಮೀರ ಮಿರ್ಝಾ, ಬಿಜೆಪಿ ಯುವಾನೆತೆ ನಿಖೀಲ ಮುರಕುಟೆ, ಮಾನವ ಹಕ್ಕ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಸುಧೀರ ಸಂಭಾಜಿ, ಸಮಾಜಸೆವಕರು ವಸೀಮ ನದಾಫ ಮತ್ತು ರಹಿವಾಸಿಗಳು ಉಪಸ್ಥಿತರಿದ್ದರು.