ಬೆಳಗಾವಿ : ಕಣಬರ್ಗಿಯ ಶ್ರೀ. ಸಿದ್ದೇಶ್ವರ ಮಂದಿರದ ಮೂಲಭೂತ ಸೌಲಭ್ಯಗಳು ಹಾಗೂ ಅಲ್ಲಿನ ಅಭಿವೃಧ್ದಿ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದೇವಸ್ಥಾನದ ಪಂಚ ಕಮೀಟಿ ಅವರೊಂದಿಗೆ ಶಾಸಕ ಅನಿಲ ಬೆನಕೆರವರು ಸಭೆ ನಡೆಸಿದರು.
ಬೆಳಗಾವಿ ನಗರದ ಸುಪ್ರಸಿದ್ದ ಹಾಗೂ ಪುರಾತನ ದೇವಸ್ಥಾನವಾದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ರಸ್ತೆ, ಶುಧ್ದ ಕುಡಿಯುವ ನೀರಿನ ಘಟಕ, ವಿದ್ಯುತ್ ದೀಪ, ಶೌಚಾಲಯ ವ್ಯವಸ್ಥೆ, ಪೇವರ್ಸ ಅಳವಡಿಕೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡುವ ಕುರಿತು ದೇವಸ್ಥಾನದ ಪಂಚರು ಹಾಗೂ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ನಂತರದಲ್ಲಿ ಬರುವ ಸೋಮವಾರದಂದು ಸಂಬಂಧಿತ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು.
ಸುಪ್ರಸಿದ್ದ ಶ್ರಿ ಸಿದ್ದೇಶ್ವರ ದೇವಸ್ಥಾನದ ಸರ್ವಾಂಗೀಣ ಅಭಿವೃಧ್ದಿಗೆ ಪಣತೊಟ್ಟಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡಿ ನಗರದ ಪುರಾತಣ ದೇವಸ್ಥಾನವನ್ನು ಅಭಿವೃಧ್ದಿಗೊಳಿಸಿ ಇನ್ನಷ್ಟು ಮೆರಗು ನೀಡಿ ಪ್ರವಾಸಿತಾಣವಾಗಿ ಮಾಡುವುದಾಗಿ ತಿಳಿಸಿದರು. ಶಾಸಕರ ಈ ಪ್ರಯತ್ನಕ್ಕೆ ಗ್ರಾಮದ ಪಂಚರು ಮತ್ತು ಮುಖಂಡರು ಹಾಗೂ ಹಿರಿಯರು ಬೆಂಬಲದೊಂದಿಗೆ ಸಂತಸವನ್ನು ವ್ಯಕ್ತಪಡಿಸಿದರು.