ಬೆಳಗಾವಿ: ಮರಾಠಾ ಸಮುದಾಯದವರು ನಡೆಸುತ್ತಿರುವ 2 ಬಿ ಯಿಂದ 2ಎ ಹೋರಾಟದ ವೇದಿಕೆಯಲ್ಲಿ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಅಬ್ಬರ ಭಾಷಣ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸುವರ್ಣಸೌಧದ ಕೊಂಡಸಕೊಪ್ಪ ಬಳಿಯ ಪ್ರತಿಭಟನಾ ಸ್ಥಳದ ವೇದಿಕೆಯ ಮೇಲೆ ಶಾಸಕ ಅನಿಲ ಬೆನಕೆ ಭಾಷಣ ಮಾಡಿ, ಸುಡು ಬಿಸಲಲ್ಲೂ ಎಲ್ಲರೂ ಕುಳಿತಿದ್ದು, ನಿಮ್ಮ ದಿಟ್ಟ ನಿರ್ಧಾರ ಎಷ್ಟಿದೆ ಎಂದು ತಿಳಿಯುತ್ತದೆ.
ಮರಾಠ ಸಮುದಾಯ ಎಂದರೆ ಸಾಯುವರೆಗೆ ಯಾರಿಗೂ ಬಗ್ಗುದಿಲ್ಲವೊ ಅದು ಮರಾಠಾ ಸಮಾಜ, ದೇಶದಲ್ಲಿ ಆಂದೋಲನ ಆದಾಗ, ದೇಶದ ಮೇಲೆ ಆಕ್ರಮಣ ಆದಾಗ ಸಂಘರ್ಷ ಮಾಡಿದ್ದು ಮರಾಠಾ ಸಮುದಾಯ, ಯಾವುದೇ ಒಂದು ಉದ್ದೇಶ ಈಡೇರಿಕೆಗೆ ಮರಾಠ ಸಮಾಜ ನಿರ್ಧಾರ ತಗೆದುಕೊಂಡ್ರೆ ಉದ್ದೇಶ ಈಡೇರುವರೆಗೆ ಕೈ ಬಿಡುವುದಿಲ್ಲ ಎಂದು ತಿಳಿಸಿದರು.
ಇಂದು ನಾವು ಸುವರ್ಣ ಸೌಧದ ಮುಂದೆ ಮರಾಠಾ ಸಮುದಾಯಕ್ಕೆ 2ಬಿ ಯಿಂದ 2ಎ ಮಿಸಲಾತಿ ನೀಡಬೇಕು ಎಂದು ಸೇರಿದ್ದೇವೆ. ಈ ವೇಳೆ ನಮಗೆ ಬೆಂಬಲ ನೀಡುತ್ತಿರುವ ಶ್ರೀಮಂತ ಪಾಟೀಲ್, ಎಂಎಲ್ ಸಿ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಅಭಯ ಪಾಟೀಲ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸಿದರು.
ಕಳೆದ 15 ವರ್ಷದಿಂದ ಮರಾಠ ಸಮುದಾಯ ಪ್ರಮುಖ ನಾಲ್ಕು ಬೇಡಿಕೆಗಳನ್ನು ಇಟ್ಟಿದೆ, ಅದರಲ್ಲಿ 2ಬಿ ಯಿಂದ 2 ಎ ಮೀಸಲಾತಿ. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸರ್ಕಾರಿ ಜಯಂತಿ ಮಾಡಬೇಕು. ಮರಾಠಾ ನಿಗಮ ಸ್ಥಾಪನೆ ಹಾಗೂ ಮರಾಠಾ ಸಮುದಾಯದವರು ಹೆಚ್ಚನ ಸಂಖ್ಯೆಯಲ್ಲಿ ಶಾಸಕರು ಆಗಬೇಕು ಎಂಬುದು ಎಂದು ಕರೆ ನೀಡಿದರು.