ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಕ್ಷೇತ್ರದಲ್ಲಿ ಅಭಿವೃಧ್ದಿಯ ಪರ್ವವನ್ನು ಮುಂದುವರೆಸಿದ್ದು, ಅದರಂತೆಯೇ ಇಂದು ಬೆಳಗಾವಿ ನಗರದ ಮುಖ್ಯ ರಸ್ತೆ ಎನಿಸಿಕೊಂಡಿರುವ ಮಹಾಂತೇಶ ನಗರದ ಬ್ರಿಡ್ಜ ದಿಂದ ಕಣಬರ್ಗಿ ರಸ್ತೆ (ಸುರಭಿ ಹೊಟೆಲ್) ವರೆಗಿನ 2 ಕಿ.ಮೀ ರಸ್ತೆಯನ್ನು ಲೋಕೊಪಯೋಗಿ ಇಲಾಖೆಯಡಿ 1 ಕೋಟಿ ರೂಪಾಯಿ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಅವರ ಅಮೃತ ಹಸ್ತದಿಂದ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಈಗಾಗಲೇ ನಗರದಲ್ಲಿ ಎಲ್ಲ ಕಡೆಗಳಲ್ಲಿ ಅಭಿವೃಧ್ದಿ ಕಾಮಗಾರಿಗಳು ಚಾಲ್ತಿಯಲ್ಲಿವೆ ಅದರಂತೆಯೇ ಇಂದು ನಗರದ ಮುಖ್ಯ ರಸ್ತೆಯಾಗಿರುವ ಮಹಾಂತೇಶ ನಗರ ಬ್ರಿಡ್ಜ ಕಡೆಗಿನ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪಲೈನ್ ಕಾಮಗಾರಿಯು ನಡೆಯುತ್ತಿದ್ದರಿಂದ ರಸ್ತೆ ನಿರ್ಮಾಣ ಕಾಮಗಾರಿಯು ತಡವಾಗಿತ್ತು. ಆದ್ದರಿಂದ ಸದ್ಯ ಮಹಾಂತೇಶ ನಗರ ಬ್ರಿಡ್ಜ ರಸ್ತೆ ಯಿಂದ ಕಣಬರ್ಗಿ ರಸ್ತೆ (ಸುರಭಿ ಹೊಟೆಲ್) ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಡಿಯ 1 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ನಗರ ಸೇವಕರು, ಅಲ್ಲಿನ ರಹವಾಸಿಗಳು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಅರವಿಂದ ದ್ಯಾಮನ್ನವರ, ಗುತ್ತಿಗೆದಾರ ಭರತೇಶ ಬುಡವಿ ಹಾಗೂ ಇತರರು ಉಪಸ್ಥಿತರಿದ್ದರು.