spot_img
spot_img
spot_img
18.7 C
Belagavi
Monday, September 26, 2022
spot_img

 ಗಣಪತಿ ಪೂಜಾ ಹಾಗೂ ಮಹಾಪ್ರಸಾದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಶಾಸಕ ಬೆನಕೆ 

spot_img
spot_img

For Breaking News Download App

ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ವತಿಯಿಂದ ಆಯೋಜಿಸಲಾದ ಗಣಪತಿ ಪೂಜಾ, ಗಣಹೋಮ, ಸತ್ಯನಾರಾಯಣ ಪೂಜಾ, ವರಲಕ್ಷ್ಮೀ ಪೂಜಾ ಹಾಗೂ ಮಹಾಪ್ರಸಾದ ಕಾರ್ಯಕ್ರಮಕ್ಕೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ತೆರಳಿ ವಿಶೇಷ ಪೂಜೆಗಳನ್ನು ಸಲ್ಲಿಸುವ ಮುಖಾಂತರ ಮಹಾಪ್ರಸಾದ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಬೆಳಗಾವಿಯ ನಗರದ ಮುರಳಿಧರ ಕಾಲೋನಿ ಹನುಮಾನ ನಗರ, ಗಣೇಶ ನಗರ, ಬಾಕ್ಸೈಟ್ ರಸ್ತೆ, ಶಾಹೂ ನಗರ, ಮಹಾಂತೇಶ ನಗರ, ಮಾರುತಿ ನಗರ ಎಸ್.ಸಿ ಮೊಟಾರ್ಸ, ಮಾಳ ಮಾರುತಿ ಬಡಾವಣೆ, ತಿಳಕ ಚೌಕ್, ರಾಮ ನಗರ, ಗೋಂದಳಿ ಗಲ್ಲಿ, ಕುಲಕರ್ಣಿ ಗಲ್ಲಿ, ರಾಮತೀರ್ಥ ನಗರ, ಯಮನಾಪೂರ, ಅಶೋಕ ನಗರ, ಕಂಗ್ರಾಳಿ ಕೆ.ಎಚ್, ಬಾಜಿ ಮಾರ್ಕೆಟ, ಆಝಾದ ಗಲ್ಲಿ, ಮಾರ್ಕಂಡೇಯ ನಗರ, ಕ್ಯಾಂಪ, ಅಲಾರವಾಡ, ಚೆನ್ನಮ್ಮ ಹೌಸಿಂಗ್ ಸೋಸಾಯಿಟಿ, ಬಾಂಧುರ ಗಲ್ಲಿ, ಸದಾಶಿವ ನಗರ ಹಾಗೂ ಬಾಜಿ ಮಾರುಕಟ್ಟೆಯಲ್ಲಿನ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ವಿಘ್ನ ವಿನಾಯಕ ಗಣಪತಿಯ ಮಂಟಪದಲ್ಲಿ ಮಹಾ ಆರತಿ, ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮೀ ಪೂಜೆ ಮಾಡುವುದರೊಂದಿಗೆ ಭಕ್ತರಿಗೆ ಮಹಾಪ್ರಸಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಅನಿಲ ಬೆನಕೆ ರವರು ಮಂಡಳಗಳಿಗೆ ತೆರಳಿ ಲಂಭೋಧರನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಮಹಾಪ್ರಸಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಹಾಪ್ರಸಾದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -