ಬೆಳಗಾವಿ: ಜಾತ್ರಾ ಉತ್ಸವ ಕಮೀಟಿ ಹಾಗೂ ಬೆಳಗಾವಿ ದೇವಸ್ಥಾನ ಕಮೀಟಿ ಇವರೊಂದಿಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಬೆಳಗಾವಿಯ ಪುರಾತನ ಪರಂಪರೆ ಹಾಗೂ ಜನರ ಧಾರ್ಮಿಕ ಮನೋಭಾವನೆಗಳಿಗೆ ಅನುಗುಣವಾಗಿ ನಗರದ ಕೆಂದ್ರ ಬಸ ನಿಲ್ದಣದ ಹತ್ತಿರವಿರುವ ಬೆಳಗಾವಿ ಗ್ರಾಮದೇವತೆಯರಾದ ಶ್ರೀ. ಮಹಾಲಕ್ಷ್ಮೀ ದೇವತೆಯರ ಗದ್ದುಗೆ ಸ್ಥಾನಕ್ಕೆ 2 ಗುಂಟೆ ಸ್ಥಳವನ್ನು ಸುನಿಶ್ಚಿತಗೊಳಿಸಿದ್ದು, ಅದಕ್ಕೆ ಬೇಕಾಗುವ ಎಲ್ಲ ಪರ್ವ ತಯಾರಿಯನ್ನು ಸಂಬಂಧಿತ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಬರುವ ಜನವರಿ ತಿಂಗಳಲ್ಲಿ ಬೆಳಗಾವಿ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಹಾಗೂ ಪಾಲಿಕೆ ಮೆರವಣ ಗೆ ನಡೆಯುತ್ತಿರುವುದರಿಂದ ಇಂದು ಈ ಸಭೆ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಕ್ಯಾಂಟೋನ್ಮೆಂಡ ಬೋರ್ಡ (ದಂಡುಮಂಡಳಿ) ಬೆಂಗಳೂರು ವತಿಯಿಂದ ಯಾವುದೇ ರೀತಿಯ ಅನುಮತಿಯನ್ನು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅನಿಲ ಬೆನಕೆ ಅವರು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸಂಜಯ ರಾಜಸ (ಕೆ.ಎಸ್.ಆರ್.ಟಿ.ಸಿ) ಗುತ್ತಿಗೆದಾರ ನವಲಗೊಂಡ, ರಂಜೀತ ಪಾಟೀಲ, ರಾಹುಲ ಮುಚ್ಚಂಡಿ, ರಾಜು ಹಲಗೇಕರ, ನಾಗೇಶ ಲಂಗರಖಂಡೆ, ಇಂದ್ರಜೀತ ಪಾಟೀಲ, ಡಿ.ಎಮ್.ಕಾಂಬಳೆ, ಸೋಮಣ್ಣ ಅಂಗಡಿ, ಎನ್.ಆರ್. ತಿಮ್ಮಾರೆಡಡ್ಡಿ, ದಿನೇಶ ಸರ್ ಹಾಗೂ ಇತರ ಜಾತ್ರಾ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.