ಬೆಳಗಾವಿ : ಬೆಳಗಾವಿ ವಕೀಲರ ಸಂಘದ ವತಿಯಿಂದ ಮಹಾರಾಷ್ಟ್ರದ ಔರಂಗಾಬಾದ ನಲ್ಲಿ ನಡೆಯಲಿರುವ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಬೆಳಗಾವಿ ವಕೀಲರ ಸಂಘದ ತಂಡವನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಶುಭಹಾರೈಸಿ ತಂಡವನ್ನು ಬೀಳ್ಕೋಟ್ಟರು.
ಈ ವೇಳೆ ಬೆಳಗಾವಿ ಬಾರ್ ಅಸೋಸಿಯೇಷನ್ ಉಪಾದ್ಯಕ್ಷರಾದ ವಿನಯ ಮಾಂಗಳೇಕರ, ಬಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಗಳಾದ ಗಿರಿಶ ಪಾಟೀಲ, ಆಯ್. ಎಮ್. ಪಾಟೀಲ, ಬೆಳಗಾವಿ ಬಾರ್ ಅಸೋಸಿಯೇಷನ್ ಮಾಜಿ ಉಪಾಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ವಕೀಲರಾದ ಹಣಮಂತ ಕೋಂಗಾಲಿ, ಹಿರಿಯ ಆಟಗಾರ ಹಾಗೂ ಕೋಚ್ ಆದ ವಕೀಲ ಸುಧೀರ ಸಖ್ರಿ ಹಾಗೂ ವಕೀಲ ಸಂಘದ ಹಲವಾರು ಸದಸ್ಯರು ಉಪಸ್ಥಿತರಿದ್ದು, ತಂಡಕ್ಕೆ ಶುಭಹಾರೈಸಿದರು.