ಬೆಳಗಾವಿ : 2018 ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಅನಿಲ ಬೆನಕೆ ಇವರ ಪ್ರಚಾರಾರ್ಥವಾಗಿ ಕೇಂದ್ರ ಗೃಹ ಸಚಿವ ಅಮಿತ ಶಾ ರವರ ಆಗಮನದ ವೇಳೆ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 197/2018 ಹಾಗೂ ಖಡೆಬಜಾರ ಪೊಲೀಸ್ ಠಾಣೆ 119/2018 ಎಂದು ಕಲಂ 127(ಎ) ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಕಲಂ 3&4 ಕೆ.ಪಿ.ಡಿ.ಪಿ ಕಾಯ್ದೆಯಡಿಯಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದ ಶಶಿಕಾಂತ ಪಾಟೀಲ ಇವರುಗಳ ಮೇಲೆ ಪ್ರಕರಣಗಳು ದಾಖಲಾಗಿತ್ತು. ಇಂದು ಬೆಂಗಳೂರಿನ ಪ್ರಜಾಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಒಟ್ಟು 18 ಸಾಕ್ಷಿಗಳ ವಿಚಾರಣೆ ನಂತರ ವಿಶೇಷ ನ್ಯಾಯಾಲಯವು ಶಾಸಕ ಅನಿಲ ಬೆನಕೆ ಹಾಗೂ ಶಶಿಕಾಂತ ಪಾಟೀಲ ಇಬ್ಬರನ್ನು ಆರೋಪಮುಕ್ತ ಎಂದು ದಿನಾಂಕ 16.12.2022 ರಂದು ತೀರ್ಪು ಪ್ರಕಟಿಸಿದೆ.
ಸದರಿ ಪ್ರಕರಣದಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಶಶಿಕಾಂತ ಪಾಟೀಲ ಇವರ ಪರವಾಗಿ ಭಾರತೀಯ ಜನತಾ ಪಕ್ಷದ ಕಾನೂನು ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಹಾಗೂ ವಕೀಲರಾದ ದೇವರಾಜ ಬಸ್ತವಾಡೆ ಇವರು ವಾದವನ್ನು ಮಂಡಿಸಿದರು ಹಾಗೂ ಬೆಳಗಾವಿ ಮಹಾನಗರದ ಕಾನೂನು ಪ್ರಕೋಷ್ಠದ ಸಹ ಸಂಚಾಲಕ ಮತ್ತು ವಕೀಲರಾದ ಸಂದೀಪ ಎಸ್. ಇವರು ಹಾಜರಿದ್ದರು.