spot_img
spot_img
spot_img
spot_img
spot_img
spot_img
spot_img
18.8 C
Belagavi
Tuesday, December 5, 2023
spot_img

5 ಕೋಟಿ ರೂ.ಗಳ ಕಾಮಗಾರಿಗಳಿಗೆ ಶಾಸಕ ಬೆನಕೆ ಭೂಮಿ ಪೂಜೆ

ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಅಭಿವೃಧ್ದಿಯ ಹರಿಕಾರರಾದ ಶಾಸಕ ಅನಿಲ ಬೆನಕೆರವರು ಬೆಳಗಾವಿ ನಗರದ ಬಾಂದುರ ಗಲ್ಲಿ, ತಹಶೀಲ್ದಾರ ಗಲ್ಲಿ ಹಾಗೂ ಮಾತೋಶ್ರಿ ಗಲ್ಲಿಗಳಲ್ಲಿ ರಸ್ತೆ, ಚರಂಡಿ, ಅಂಡರ್ ಗ್ರೌಂಡ ಕೇಬಲ್ ಅಳವಡಿಕೆ, ಡ್ರೈನೇಜ್ ಹಾಗೂ ಇತರೆ ಅಭಿವೃಧ್ದಿಗೆ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭೂಮಿ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಅವರು ಬಾಂದುರ ಗಲ್ಲಿಯನ್ನು ಮಾದರಿ ಗಲ್ಲಿಯಾಗಿ ಪರಿವರ್ತನೆ ಮಾಡಲು ರೂ. 1 ಕೋಟಿ 60 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಅದರಂತೆಯೆ ತಹಶೀಲ್ದಾರ ಗಲ್ಲಿಯಲ್ಲಿ ರೂ. 2 ಕೋಟಿ 86 ಲಕ್ಷ ರೂಪಾಯಿ ವೆಚ್ಚದಲ್ಲಿ ಡ್ರೈನೇಜ್ ನಿರ್ಮಾಣ, ಪಾದಚಾರಿ ರಸ್ತೆ, ಹೊಸ ಯು.ಜಿ.ಡಿ ಲೈನ್ ಹಾಗೂ ವಿದ್ಯತ್ ಅಳವಡಿಕೆ ಕಾಮಗಾರಿಗನ್ನು ಕೈಗೊಳ್ಳಲು ಚಾಲನೆ ನೀಡಲಾಗಿದೆ ಹಾಗೂ ಮಾತೋಶ್ರೀ ಗಲ್ಲಿಯಲ್ಲಿ ರೂ. 63.54 ಲಕ್ಷಗಳ ವೆಚ್ಚದಲ್ಲಿ ಡ್ರೈನೇಜ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಭೂಮಿ ಪೂಜೆಯನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಳಗಾವಿ ನಗರದ ಜನತೆಯ ಸಹಾಯ ಸಹಕಾರದಿಂದ ನಗರದಲ್ಲಿ ಇದುವರೆಗೂ ಸಾಕಷ್ಟು ಅಭಿವೃಧ್ದಿ ಕೆಲಸಗಳು ಆಗಿದ್ದು, ನಗರದ ಗಲ್ಲಿಗಳನ್ನು ಮಾದರಿ ಗಲ್ಲಿಗಳಾಗಿ ಅಭಿವೃದ್ದಿ ಪಡಿಸುವ ಕನಸು ನಮ್ಮದಾಗಿರುವುದರಿಂದ ಸದ್ಯ ಬಾಂದುರಗಲ್ಲಿಯನ್ನು ಮಾದರಿ ಗಲ್ಲಿಯಾಗಿ ಮಾಡಲು ಕ್ರಮ ಕೈಗೊಂಡು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಮುಂದಿನ ಹಂತದಲ್ಲಿ ನಗರದಲ್ಲಿ ಇರುವ ಇತರೆ ಗಲ್ಲಿಗಳನ್ನು ಮಾದರಿ ಗಲ್ಲಿಗಳಾಗಿ ಅಭಿವೃಧ್ದಿ ಪಡಿಸುತ್ತೇವೆ. ಈಗ ಚಾಲನೆ ನೀಡಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಲ್ ಆಂಡ್ ಟಿ ಕಂಪನಿಯ ಅಧಿಕಾರಿಗಳು, ಕೆ.ಇ.ಬಿ ಅಧಿಕಾರಿಗಳು, ಗುತ್ತಿಗೆದಾರರು, ನಗರಸೇವಕಿಯರಾದ ವೈಶಾಲಿ ಸಿದ್ಧಾರ್ಥ ಭಾತಕಾಂಡೆ, ಪೂಜಾ ಈಂದ್ರಜೀತ ಪಾಟೀಲ, ರೇಷ್ಮಾ ಪ್ರವೀಣ ಪಾಟೀಲ, ಶ್ರೇಯಸ ನಾಕಾಡಿ, ಸ್ಥಳಿಯರಾದ ಅಜಿತ ಯಾದವ, ರಾಜು ಮೊದಗೆಕರ, ನಾರಾಯನ ಖಾಂಡೆಕರ, ಯಶವಂತ ಜಾಧವ, ಮಹಾದೇವ ಜಾಧವ, ಮಧು ಉಚಗಾಂವಕರ, ಸುರೇಖಾ ಹೋನಗೆಕರ, ಸುಜಾತಾ ಹೋನಗೆಕರ, ಅನಿತಾ ಪವಾರ, ಗಜಾನನ ಝೀಂಜಿ, ಗುರುನಾಥ ಚೌಗುಲೆ, ಶ್ರೀಧರ ಪಾಟೀಲ ಸೇರಿದಂತೆ ಇತರ ರಹವಾಸಿಗಳು, ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related News

2030 ರೊಳಗೆ ಅಪೌಷ್ಠಿಕತೆ ಗಣನೀಯ ಪ್ರಮಾಣದಲ್ಲಿ ನಿಯಂತ್ರಣ-ಸಚಿವ ದಿನೇಶ್ ಗುಂಡೂರಾವ್

ಸುವರ್ಣ ಸೌಧ ಬೆಳಗಾವಿ: ಮಹಿಳೆಯರು ಮತ್ತು ಮಕ್ಕಳಲ್ಲಿರುವ ರಕ್ತಹೀನತೆ(ಅನೀಮಿಯಾ)ವನ್ನು 2030 ರೊಳಗೆ ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಧಾನಪರಿಷತ್ತಿನ ಶೂನ್ಯ ವೇಳೆಯಲ್ಲಿ ಸದಸ್ಯ ನಾಗರಾಜ್...

ಆನೆ ಹಾವಳಿ ನಿಯಂತ್ರಣ ಸಿಬ್ಬಂದಿಗೆ ಹೆಚ್ಚಿನ ತರಬೇತಿ-ಸಚಿವ ಈಶ್ವರ ಖಂಡ್ರೆ

ಸುವರ್ಣ ಸೌಧ ಬೆಳಗಾವಿ: ರಾಜ್ಯದಲ್ಲಿ ಈಗಾಗಲೇ ಏಳು ಆನೆ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದ್ದು, ಆನೆ ಹಿಡಿಯಲು ನಿಯೋಜಿಸಿರುವ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುವುದ ಎಂದು ಅರಣ್ಯ ,ಜೈವಿಕ ಮತ್ತು ಪರಿಸರ ಸಚಿವ ಈಶ್ವರ...

Latest News

- Advertisement -
- Advertisement -
- Advertisement -
- Advertisement -