ಬೆಳಗಾವಿ: ಡಿ-ಮಾರ್ಟ್ ಬಳಿಯ ನೆಹರು ನಗರದ ರಸ್ತೆಯ ನಿರ್ಮಾಣದ ಕಾಮಗಾರಿಗೆ ಶಾಸಕ ಆಸೀಫ್ (ರಾಜು) ಸೇಠ್ ಚಾಲನೆ ನೀಡಿದರು.
ನೆಹರು ನಗರದ ರಸ್ತೆಯು ಯಾವಾಗಲೂ ಪ್ರಯಾಣಿಕರಿಗೆ ಸವಾಲಾಗಿತ್ತು, ಏಕೆಂದರೆ ದೀರ್ಘಕಾಲದವರೆಗೆ ರಸ್ತೆಗಳ ದುರವಸ್ಥೆಗಳ ಬಗ್ಗೆ ದೂರುಗಳು ಆಗಾಗ್ಗೆ ನಿರ್ಲಕ್ಷಿಸಲ್ಪಟ್ಟಿವೆ. ಶಾಸಕ ಆಸೀಫ್ (ರಾಜು) ಸೇಠ್ ಅವರು ನೆಹರೂನಗರಕ್ಕೆ ಕಳೆದ ಬಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದ್ದರು ಅದೇ ರೀತಿ ಮಂಗಳವಾರ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಿಲಾನ್ಯಾಸ ಸಮಾರಂಭದಲ್ಲಿ ಅರಿಹಂತ ಆಸ್ಪತ್ರೆಯ ಡಾ.ಮಹಾದೇವ ದೀಕ್ಷಿತ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.