ಬೆಳಗಾವಿ: ಕಾಂಗ್ರೆಸ್ ಭವನದಲ್ಲಿ ಬೆಳಗಾವಿ ಜಿಲ್ಲಾ ಮೈನಾರಿಟಿ ವರ್ಕಿಂಗ್ ಕಮಿಟಿಯ ಪದಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ ಬೆಳಗಾವಿ ಮಹಾನಗರ ಅಧ್ಯಕ್ಷ ಹಾಗೂ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ ರಾಜು ಸೆಟ್ ನೂತನವಾಗಿ ಆಯ್ಕೆಗೊಂಡಿರುವಂತ ಜಿಲ್ಲಾ ಮಟ್ಟದ 24 ವಿವಿಧ ಪದಾಧಿಕಾರಿಗಳಿಗೆ ಆದೇಶ ಪ್ರತಿಯೊಂದು ವಿತರಿಸಿದರು.
ಬೆಳಗಾವಿ ಜಿಲ್ಲಾ ಮೈನಾರಿಟಿ ಪದಾಧಿಕಾರಿಗಳನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ ರಾಜು ಸೆಟ್ ಮತ್ತು ಬೆಳಗಾವಿ ಜಿಲ್ಲಾಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ವಿನಯ್ ನವಲಗಟ್ಟಿಅವರ ಮಾರ್ಗದರ್ಶನದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಬೆಳಗಾವಿ ಜಿಲ್ಲಾ ಮೈನಾರಿಟಿ ಕಮಿಟಿ ಒಟ್ಟು 24 ಪದಾಧಿಕಾರಿಗಳ ಕೆಪಿಸಿಸಿ ರಾಜ್ಯಾಧ್ಯಕ್ಷರು ಆದೇಶದ ಮೆರೆಗೆ ಜಿಲ್ಲಾ ಮೈನಾರಿಟಿ ಅಧ್ಯಕ್ಷರಾಗಿ ಮನ್ಸೂರ್ ಅಖತ್ತಾರ್, ಉಪಾಧ್ಯಕ್ಷರಾಗಿ ತಬ್ಬಸುಮ್ ಮುಲ್ಲಾ, ಹಜ್ಜಿ ಮೋಸ ಗುರಿಖಾನ್, ಮಂಜೂರು ಸಮಶೇರ, ಕಾರ್ಯದರ್ಶಿಯಾಗಿ ಅಬ್ದುಲ್ ಮುಲ್ಲಾ , 8 ವಿಧಾನಸಭಾ ಕ್ಷೇತ್ರಗಳಲ್ಲಿ 16 ಜನ ಬ್ಲಾಕ್ ಅಧ್ಯಕ್ಷರುಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಆಸಿಫ್ ಸೆಟ್ ಇಂದು ಮೈನಾರಿಟಿ ಕಮಿಟಿಯ ಪದಾಧಿಕಾರಿಗಳ ನೇಮಕಾತಿಯನ್ನು ಮಾಡಲಾಗಿದೆ. ಪ್ರತಿಬಾರಿಯೂ ಮೈನಾರಿಟಿ ಸಮಾಜ ಕಾಂಗ್ರೆಸ್ ಪಕ್ಷದ ಪರವಾಗಿ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಬಂದಿದೆ ಅದರಿಂದಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಸಲುವಾಗಿ ಸತತವಾಗಿ ಕಾರ್ಯನಿರ್ವಸುತ್ತಾ ಬಂದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಜನಪರ ಕಾರ್ಯಕ್ರಮಗಳ ಜೊತೆಗೇ ಅಭಿವೃದ್ಧಿಯತ್ತ ಸಾಗುತ್ತಿದೆ.
ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮಾಜಕ್ಕೆ ಸ್ಥಾನಗಳನ್ನು ದೊರಕಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಬೆಳಗಾವಿ(belagavi) ಜಿಲ್ಲಾ ಮೈನಾರಿಟಿ ಅಧ್ಯಕ್ಷರಾದ ಮನ್ಸೂರ್ ಅಖತ್ತಾರ್ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಸಲುವಾಗಿ ನಾವು ಪ್ರಯತ್ನಿಶೀಲರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ರಾಜು ಆಸಿಫ್ ಸೆಟ್, ಮೈನಾರಿಟಿ ಕಮಿಟಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮನೂಸುರ ಅಖತ್ತಾರ, ಸಲೀಂ ಖತೇಬ್ ರಸೂಲ್ ಮುಲ್ಲಾ ಇಮ್ರಾನ್ ತಕ್ಕೀರ ಮುಂತಾದವರು ಉಪಸ್ಥಿತರಿದ್ದರು.