ಬೆಳಗಾವಿ: ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕರ್ನಾಟಕ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದನ್ನು ಖಂಡಿಸಿ ಇಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಹಾಗೂ ನಗರ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮತ್ತು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ ರಾಜು ಸೆಟ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೂಳಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾಂಗ್ರೆಸ್ ಭವನದಿಂದ ಪ್ರತಿಭಟನೆ ಪ್ರಾರಂಭಗೊಂಡು ಸಂಗೊಳ್ಳಿ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆದುಕೊಂಡು ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉತ್ತರ ಕ್ಷೇತ್ರದ ಶಾಸಕ ಆಸಿಫ್( ರಾಜು) ಸೆಟ್ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಕಚೇರಿ ಇಂದ ಏನು ಆದೇಶ ಬರುತ್ತದೆ ಆ ಆದೇಶವನ್ನು ರಾಜ್ಯಪಾಲರು ಜಾರಿ ಮಾಡುತ್ತಿದ್ದಾರೆ. ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರು ಪಕ್ಷಪಾತ ಹಾಗೂ ನ್ಯಾಯ ಸಮೇತವಾಗಿ ಇರಬೇಕು ಅವರು ಅದನ್ನು ಮಾಡುತ್ತಿಲ್ಲ ರಾಷ್ಟ್ರಪತಿಗಳು ಕರ್ನಾಟಕದ ರಾಜ್ಯಪಾಲರನ್ನು ಕೂಡಲೇ ಬದಲಾಯಿಸಬೇಕು.
ಭಾರತೀಯ ಜನತಾ ಪಕ್ಷ ಕಳೆದ ಆರು ತಿಂಗಳ ಗಳಿಂದ ಕರ್ನಾಟಕದ ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿದೆ ಆದರೆ ಕರ್ನಾಟಕದ ಜನತೆ ನಮಗೆ 136 ಶಾಸಕರನ್ನು ನೀಡಿ ಸರ್ಕಾರ ನಡೆಸಲು ಆಶೀರ್ವಾದ ಮಾಡಿದ್ದಾರೆ. ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಪರವಾಗಿ 136 ಶಾಸಕರುಗಳು ಸಚಿವರುಗಳು ಜೊತೆಗಿದ್ದೇವೆ ಎಂದು ವಿರೋಧಿಗಳಿಗೆ ಮಾತಿನಿಂದಲೇ ಕುಟುಕಿದರು.
ನಿಮ್ಮ ಮೂಲಕ ರಾಜ್ಯಪಾಲರಿಗೆ ನಾನು ತಿಳಿ ಹೇಳುತ್ತೇನೆ ಕೂಡಲೇ ಪ್ರಾಸಿಕ್ಯೂಷನ್ ವಾಪಸ್ ಪಡೆಯಬೇಕು ನಮ್ಮ ಪಕ್ಷಕ್ಕೆ ನ್ಯಾಯ ನೀಡಬೇಕು, ನಮ್ಮ ಸರ್ಕಾರಕ್ಕೆ ನ್ಯಾಯ ನೀಡಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಶಾಸಕ ಆಸಿಫ್( ರಾಜು )ಸೆಟ್
ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೂಳಿ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಪ್ರದೀಪ್ ಎಂ ಜಿ, ಕಾಂಗ್ರೆಸ್ ಪಕ್ಷದ ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷದ ವಿವಿಧ ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು