ಆಡಳಿತ ಹಾಗೂ ಜನತೆಯ ನಡುವೆ ಸಂಪರ್ಕ ಸಾಧಿಸಲು ಬೆಳಗಾವಿ ಉತ್ತರ ಶಾಸಕ ಆಸೀಫ್ (ರಾಜು) ಸೇಟ್ ಅವರು ಜನರಿಗೆ ಮೂಲಭೂತ ಸೌಕರ್ಯಗಳು ನೀಡಲು ಸಹಾಯವಾಣಿ ಸಂಪರ್ಕ ಕೇಂದ್ರಗಳನ್ನು ನಾಲ್ಕು ವಿಭಾಗಗಳನ್ನಾಗಿ ಜುಲೈ 29, 2023 ರಂದು ಪ್ರಾರಂಭ ಮಾಡಲಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಜೊತೆ ನನ್ನ ಕ್ಷೇತ್ರದ ಜನತೆಗೆ ನಾನು ಒಂದು ಭರವಸೆಯನ್ನು ನೀಡಿದ್ದೆ ಸರ್ಕಾರದ ಸೌಕರ್ಯಗಳನ್ನು ಸೇವೆಗಳನ್ನು ಜನರ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆ ಭರಸೆಯಂತೆ ನನ್ನ ಕ್ಷೇತ್ರದ ಜನತೆಗೆ ಸಹಾಯವಾಣಿ ಮೂಲಕ ರಸ್ತೆ, ನೀರು, ವಿದ್ಯುತ, ಹಾಗೂ ಇತರೆ ಸರ್ಕಾರಿ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಇದರ ಜೊತೆಗೆ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು ಈ ನಾಲ್ಕು ತಂಡಗಳಿಗೆ ಸಹಾಯವಾಣಿಯನ್ನು ಒದಗಿಸಲಾಗಿದೆ ಯಾವುದೇ ಸಮಸ್ಯೆಗಳು ಇದ್ದರೂ ಈ ಸಹಾಯವಾಣಿಗಳಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಬಹುದು. ಅಲ್ಲದೆ ಸರ್ಕಾರದ ಇಲಾಖೆಗಳು ಹಾಗೂ ಜನರ ನಡುವಿನ ಸಂಪರ್ಕವನ್ನು ಸುಗಮಗೊಳಿಸಲು ಸಹಾಯವಾಣಿ ಅತ್ಯಂತ ಉಪಯೋಗದಾಯಕವಾಗಲಿದೆ ಎಂದರು.
ಸಹಾಯವಾಣಿ ಈ ರೀತಿ ಇವೆ
+91-9686676217
+91-9686676218
+91-9686676220
ಈ ಸಹಾಯವಾಣಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ಸೇವೆ ಪ್ರಾರಂಭಿಸುತ್ತದೆ