ಬೆಳಗಾವಿ : ಫುಲಬಾಗ ಗಲ್ಲಿಯಲ್ಲಿ 36 ಸಮಾಜ ಪ್ರಮುಖರೊಡನೆ ಶಾಸಕ ಅನಿಲ ಬೆನಕೆ ಸಭೆ ನಡೆಸಿದರು. ಹಾಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕೆಲಸಗಳು ಹಾಗೂ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕ ಅನಿಲ ಬೆನಕೆ 36 ವಿವಿಧ ಸಮಾಜದ ಪ್ರಮುಖರೊಂದಿಗೆ ಸಭೆ ನಡೆಸಿದರು ಹಾಗೂ ಅವರ ಬೇಡಿಕೆ ಪ್ರಕಾರ ಶೀಘ್ರದಲ್ಲಿ ಹಾಯ-ಟೆಕ್ ಗೊ-ಶಾಲೆ ನಿರ್ಮಾಣ ಮಾಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಠಕ್ಕರ, ಶ್ರೀ ರೋಹಿತ ರಾವಳ, ಶ್ರೀ ರಮೇಶ ಭಂಡಾರಿ, ಶ್ರೀ ವಿಜು ಪೋರವಾಲ, ಶ್ರೀ ಮಂಗಲಜಿ ಚೌಧರಿ, ಶ್ರೀ ಮಹೇಶ ಪೋರವಾಲ, ಶ್ರೀ ಸಂಜು ಅಗರವಾಲ, ಶ್ರೀ ಗೆಲಾರಾಮ ಪ್ರಜಾಪತಿ, ಶ್ರೀ ವಿಜಯ ಜಾಧವ ಮತ್ತು ಎಲ್ಲ 36 ಸಮಾಜ ಪ್ರಮುಖಕರು ಉಪಸ್ಥಿತರಿದ್ದರು.