Ad imageAd image

ಮಹಾತ್ಮ ಪುಲೆ ರಸ್ತೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು: ಶಾಸಕ ಅಭಯ ಪಾಟೀಲ್

ratnakar
ಮಹಾತ್ಮ ಪುಲೆ ರಸ್ತೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು: ಶಾಸಕ ಅಭಯ ಪಾಟೀಲ್
WhatsApp Group Join Now
Telegram Group Join Now

ಬೆಳಗಾವಿ ನಗರದ ಶಾಹಪುರ್ ಮಹಾತ್ಮ ಪುಲೆ ರಸ್ತೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸ್ಥಳೀಯ ವ್ಯಾಪಾರಸ್ಥರು ಶಾಲಾ ಸಂಸ್ಥೆಗಳು ವಿದ್ಯಾರ್ಥಿಗಳು ಪೋಷಕರು ಶಾಸಕ ಅಭಯ ಪಾಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ

ಕಳೆದ ಎರಡು ಮೂರು ತಿಂಗಳಿಗಳಿಂದ ಮಹಾತ್ಮ ಪುಲೆ ರಸ್ತೆ ಬ್ಯಾಂಕ್ ಆಫ್ ಇಂಡಿಯಾ ದಿಂದ ಹಳೆ ಪಿಬಿ ರಸ್ತೆ ಸೇರುವ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಬಂದು ಮಾಡಲಾಗಿದೆ ಇದರಿಂದ ಸ್ಥಳೀಯ ಜನರಿಗೆ ಹಾಗೂ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಇದೆ ಕಳೆದ ದಿನಗಳಲ್ಲಿ ವಿದ್ಯಾರ್ಥಿಗಳ ರಸ್ತೆ ಅಪಘಾತಗಳಿಗೂ ಕಾರಣವಾಗಿದೆ ಇದಕ್ಕೆಲ್ಲ ಯಾರು ಜವಾಬ್ದಾರರು ?ಎಂದು ಸ್ಥಳೀಯ ಜನ ಪ್ರಶ್ನೆ ಮಾಡುತ್ತಿದ್ದಾರೆ.

ಶಾಸಕ ಅಭಯ್ ಪಾಟೀಲ್ ಅವರಿಗೆ ಸ್ಥಳೀಯ ಜನರು ಮನವಿ ಸಲ್ಲಿಸಿ ಮಹಾತ್ಮ ಪುಲೆ ರಸ್ತೆಯನ್ನು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ ಅದಕ್ಕೆ ಸ್ಪಂದಿಸಿದ ಶಾಸಕರು ಎರಡು ಮೂರು ತಿಂಗಳಗಳಲ್ಲಿ ಇದಕ್ಕೊಂದು ಪರಿಹಾರ ಹುಡುಕಲಾಗುವುದು ಹಾಗೂ ಸ್ಥಳಿಯ ಆಡಳಿತ ಜೊತೆ ಮಾತುಕತೆ ನಡೆಸಿ ಒಂದು ಕಡೆಯ ರಸ್ತೆ ಸಂಚಾರಕ್ಕೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ

WhatsApp Group Join Now
Telegram Group Join Now
Share This Article