ಸರ್ಕಾರ ನೂರು ದಿನ ಪೂರೈಸಿದೆ ಆದರೆ ಈಗಲೇ ಪರ್ಫಾರ್ಮೆನ್ಸ್ ತೋರಿಸಲು ಆಗುವುದಿಲ್ಲ ಆದರೂ ನೂರು ದಿನದ ಸಾಧನೆಯ ಪುಸ್ತಕವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಸರ್ಕಾರದ ಸಾಧನೆ ಕನಿಷ್ಠ ಆರು ತಿಂಗಳಾದರೂ ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಪಂಚಾಯತ್ ಸ್ವರಾಜ್ ಸಮಾಚಾರ ದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದೆ. ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಕನಿಷ್ಠ ಆರು ತಿಂಗಳಾದರೂ ಬೇಕು ಸರ್ಕಾರದ ಪರ್ಫಾರ್ಮೆನ್ಸ್ ತೋರಿಸಲು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಕುರಿತು ಸ್ಥಾಪಿಸಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣವಾದ ಬಹುಮತ ಇದೆ ಎಂದರು.
ಜೆಡಿಎಸ್ ಸ್ವತಂತ್ರವಾದ ಪಕ್ಷ ಅದು ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ನಿರ್ಧಾರ ಮಾಡುವ ಸ್ವತಂತ್ರ ಪಕ್ಷಕ್ಕೆ ಇದೆ ಆದರೆ ಜಾತ್ಯತೀತವಾದ ಪಕ್ಷವಾಗಿರುವ ಜೆಡಿಎಸ್ ವಿಚಾರ ಮಂತನ ಮಾಡುವ ಅವಶ್ಯಕತೆ ಕೂಡ ಇದೆ .ಎಂದು ಸಲಹೆ ನೀಡಿದರು.
2018ರಲ್ಲಿ ವಿಧಾನಸಭೆಯ ಸದನದಲ್ಲಿ ಮಾಜಿ ಮುಖ್ಯಮಂತ್ರಿಗಳು ಬಿ.ಎಸ್ ಯಡಿಯೂರಪ್ಪ ಅವರು ಡಿ.ಕೆ ಶಿವಕುಮಾರ್ ಅವರಿಗೆ ಮೈತ್ರಿ ಸರ್ಕಾರದ ಕುರಿತು ಪ್ರಸ್ತಾಪಿಸುತ್ತಾ, ಅಪ್ಪ-ಮಕ್ಕಳ ಪಕ್ಷಕ್ಕೆ ನೀವು ಹೋದರೆ ನೀವು ರಸ್ತೆಗೆ ಬಂದು ಇಳಿವಿರಿ ನನ್ನನ್ನು ನಂಬಿ ಅಪ್ಪ ಮಕ್ಕಳ ಪಕ್ಷದಿಂದ ಯಾರಿಗೂ ಒಳ್ಳೆಯದಾಗಿಲ್ಲ ನಿಮಗೂ ಒಳ್ಳೆಯದಾಗುವುದಿಲ್ಲ ಎಂಬ ಸಲಹೆ ಆ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪನವರು ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದರು. ಈ ವಿಷಯವನ್ನು ವರದಿಗಾರರು ಸಚಿವರಿಗೆ ಪ್ರಶ್ನಿಸಿದಾಗ ಈ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಬಿ .ಎಸ್ ಯಡಿಯೂರಪ್ಪನವರ ಉತ್ತರ ನೀಡಬೇಕು ಕೆಲವೊಂದು ಸಂದರ್ಭದಲ್ಲಿ ರಾಜಕೀಯ ಸನ್ನಿವೇಶಗಳು ಎದುರಾಗುತ್ತವೆ ಇಂತಹ ಹೇಳಿಕೆಗಳಿಗೆ ರಾಜಕೀಯವಾಗಿ ಸ್ಥಿರವಾಗಿ ನಿಲ್ಲಲು ಆಗುವುದಿಲ್ಲ.
G 20 ಸಮ್ಮೇಳನದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ರಾಷ್ಟ್ರಪತಿ ಆಯೋಜಿಸಿದ ಭೋಜನಕೋಟಕ್ಕೆ ಆಹ್ವಾನ ನೀಡದೇ ಇರುವುದ ಚರ್ಚೆಗೆ ಗ್ರಹಸವಾಗಿದೆ ,ಭೋಜನ ಕೊಟ್ಟಕ್ಕೆ ಕರೆದೆ ಇರುವುದು ಕೇಂದ್ರ ಸರ್ಕಾರದ ಸಣ್ಣತನ ಈ ವಿಷಯಕ್ಕೆ ಪ್ರಚಾರ ನೀಡದೆ ಇರುವುದು ಒಳ್ಳೆಯದು. ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು